ಶ್ರೀ ಕಾಳಿಕಾಂಬ ಕಮಟೇಶ್ವರ ಸೇವಾಭಿವೃದ್ಧಿ ಸಮಿತಿ (ರಿ ) ವತಿಯಿಂದ ವಾರ್ಷಿಕೋತ್ಸವ ಸಮಾರಂಭ, ಹಾಗೂ ಮಹಾರುದ್ರ ಚಂಡಿ ಹೋಮ ಸಾಮೂಹಿಕ ಉಪನಯನ ಮತ್ತು ಧಾರ್ಮಿಕ ಸಭೆ ಮತ್ತು ಧಾರ್ಮಿಕ ಸಭೆ

ಭಾಸ್ಕರ ಪತ್ರಿಕೆ
0

ತಿಪಟೂರು: ಶ್ರೀ ಕಾಳಿಕಾಂಬ ಕಮಟೇಶ್ವರ ಸೇವಾಭಿವೃದ್ಧಿ ಸಮಿತಿ (ರಿ )247   ವಿಶ್ವಕರ್ಮ ಸಮಾಜ ತಿಪಟೂರು, ಇವರ ವತಿಯಿಂದ ವಾರ್ಷಿಕೋತ್ಸವ ಸಮಾರಂಭ, ಹಾಗೂ ಮಹಾರುದ್ರ ಚಂಡಿ ಹೋಮ ಸಾಮೂಹಿಕ ಉಪನಯನ ಮತ್ತು ಧಾರ್ಮಿಕ ಸಭೆ ಮತ್ತು ಧಾರ್ಮಿಕ ಸಭೆ, ಕಾಳಮ್ಮನ ಬೆಟ್ಟ ಹೊನ್ನವಳ್ಳಿ ಹೋಬಳಿ, ತಿಪಟೂರ್ ತಾಲೂಕು, ದಿನಾಂಕ 08.02.2026 ನೇ ಭಾನುವಾರ, ಪರಮಪೂಜ್ಯ ಅಷ್ಟೋತ್ತರ ಶತಶ್ರೀ ಶಂಕರ ಆತ್ಮಾನಂದ ಸರಸ್ವತಿ ಮಹಾಸ್ವಾಮಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ನಿಂಗಾಚಾರ  ಹಾಲ್ಕುರಿಕೆ   ಅಧ್ಯಕ್ಷರು ಶ್ರೀ ಕಾಳಿಕಾಂಬ ಕಮುಟೆಶ್ವರ ಸೇವಾ ಅಭಿವೃದ್ಧಿ ಸಮಿತಿ, ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೆ ಷಡಾಕ್ಷರಿ ಶಾಸಕರ ತಿಪಟೂರು  ಇವರು ಉದ್ಘಾಟಿಸಿ, ಮಾತನಾಡಿದರು  ಈ ಸಮಾಜ ಬಡವರ ಸಮಾಜ ಅಲ್ಪಸಂಖ್ಯಾತರ ಸಮಾಜ, ನಿಮ್ಮ ಸೇವೆಗೆ ನಾನು ಯಾವಾಗಲೂ ಸದಾ ಸಿದ್ದ ನೀವು ಎಲ್ಲರೂ ಒಗ್ಗಟ್ಟಾಗಿ ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.



ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ವಿ. ಯೋಗೇಶ್ ಕೆಪಿಸಿಸಿ ಸದಸ್ಯರು ತಿಪಟೂರ್, ಶ್ರೀ ಉಪೇಂದ್ರರವರು ನಿವೃತ್ತ  ಪ್ರಾಂಶುಪಾಲರು ತಿಪಟೂರು, ಶ್ರೀ ಸಿದ್ದಪ್ಪನವರು ರೈತ ಸಂಘದ ಮುಖಂಡರು  ಮತ್ತು ಸದಸ್ಯರು ಬಳುವನೇರಲು, ಶ್ರೀ ಭಾಸ್ಕರ್ ರವರು ಭಾಸ್ಕರ್ ಪತ್ರಿಕೆ ಸಂಪಾದಕರು, ಮತ್ತು ಸಮಾಜದ ಮುಖಂಡರು. ಕೆಂಪಾಚಾರ್ ಸಮಾಜದ ಮುಖಂಡರು, ಸರ್ವೇಶ್ ಆಚಾರ್ ಸಮಾಜದ ಮುಖಂಡರು, ಗಣೇಶ ಚಾರ್ ಸಮಾಜದ ಮುಖಂಡರು ಹಾಗೂ ಎಲ್ಲಾ ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರುಗಳು ಹಾಜರಿದ್ದರು. ಇಂದು ಸಂಜೆ ಶ್ರೀ ಸುಜ್ಞಾನಮೂರ್ತಿ. ಪಿ ಕನ್ನಡ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ, ಇವರು ದೇವಸ್ಥಾನಕ್ಕೆ ಭೇಟಿಕೊಟ್ಟು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*