ಕಲ್ಪತರು ನಾಡು ತಿಪಟೂರಿನ ಹಾಸನ ಸರ್ಕಲ್ನ ನಂದಿನಿ ಡೈರಿ ಮಳಿಗೆಯಲ್ಲಿ ಕಲಾವಿದ ವಿಷ್ಣು ಸರ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ಕರ್ನಾಟಕ ಸಂಪಾದಕರ ಮತ್ತು ವರದಿಗಾರ ಸಂಘ (ರಿ )ಪ್ರಧಾನ ಕಛೇರಿ ಬೆಂಗಳೂರಿನಲ್ಲಿ ಪ್ರಾರಂಭವಾಗಿ ಅತ್ಯಂತ ಯಶಸ್ವಿಗೊಳಿಸಿ ನಂತರ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ತನ್ನ ಘಟಕಗಳನ್ನು ವಿಸ್ತರಿಸಿ: ತುಮಕೂರು ಜಿಲ್ಲೆ ತಿಪಟೂರು ತಾಲೂಕು ಘಟಕವನ್ನು ಪ್ರಾರಂಭಿಸಲು ದಿನಾಂಕ:- 13-2-2021 ರಲ್ಲಿ ರಾಜ್ಯಾಧ್ಯಕ್ಷರಾದ ಕಲಾವಿದ ವಿಷ್ಣು ರವರ ಮಾರ್ಗದರ್ಶನದಲ್ಲಿ ತಿಪಟೂರಿನ ಹಿರಿಯ ಪತ್ರಕರ್ತರಾದ ಡಾ. ಭಾಸ್ಕರ್ ರವರ ನೇತೃತ್ವದಲ್ಲಿ ಶ್ರೀಯುತರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಾತ್ಯಾತೀತ ವಾಣಿಯ ಶ್ರೀ ಎಸ್ ಗಣೇಶ ರವರನ್ನು, ಉಪಾಧ್ಯಕ್ಷರಾಗಿ ರೈತಕವಿ ಡಾ. ಪಿ ಶಂಕ್ರಪ್ಪ ಬಳ್ಳೇಕಟ್ಟೆ ಹಾಗೂ ರೇಣುಕ ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಕುಪ್ಪಾಳು ಧರಣೇಶ್, ಖಜಾಂಚಿಯಾಗಿ ಭಾಸ್ಕರ್ ಯೂಟ್ಯೂಬ್ ನ ಸುದ್ದಿ ವಾಚಕಿ ಶುಭ ವಿಶ್ವಕರ್ಮ ಅವರನ್ನು ಹಾಗೂ ನಿರ್ದೇಶಕರಾಗಿ ಗಿರೀಶ್, ಮೋಹನ್ ಕೆಎಸ್, ತ್ರಿವೇಣಿ ಸುಂದರ್, ಉಮಾದೇವಿ, ಕಾನೂನು ಸಲಹೆಗಾರರಾಗಿ ವಕೀಲರಾದ ಬಸವರಾಜು, ಗೌರವ ಸಲಹೆಗಾರರಾಗಿ ಸತೀಶ್ ಮುಳ್ಳೂರು, ಡಾ. ಎಲ್ ಎಂ ವೆಂಕಟೇಶ್, ಕನ್ನಡ ಸೋಮು ವರನ್ನು ಒಳಗೊಂಡ ತಾಲೂಕು ಘಟಕವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.
ತಿಪಟೂರು ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ದಿನಾಂಕ: 23/06.2021ರ ಶುಕ್ರವಾರ ಅಧಿಕೃತವಾಗಿ ಸಂಘವನ್ನು ಉದ್ಘಾಟನೆ ಮಾಡಲು ತೀರ್ಮಾನಿಸಿ ಉದ್ಘಾಟಕರಾಗಿ ನಗರಸಭಾ ಉಪಾಧ್ಯಕ್ಷರಾದ ಸೊಪ್ಪು ಗಣೇಶ ರವರು ಮತ್ತು ನಗರಸಭಾ ಸದಸ್ಯರಾದ ಸದಸ್ಯರಾದ ಯೋಗೇಶ್ ರವರು ಹಾಗೂ ರಾಜ್ಯಾಧ್ಯಕ್ಷರಾದ ಕಲಾವಿದರ ಕಲಾವಿದ ವಿಷ್ಣು ಸರ್ ಹಾಗೂ ಜಿಲ್ಲಾಧ್ಯಕ್ಷರಾದ ಪ್ರದೀಪ್ ಪಾವ್ಗಡ ನಂತರ ತಾಲೂಕ್ ಘಟಕದ ಅಧ್ಯಕ್ಷರಾದಂತ ಗಣೇಶ್ ಗೌರವ ಅಧ್ಯಕ್ಷರಾದಂತ ಭಾಸ್ಕರ ಅವರು ಹಾಗೂ ಎಲ್ಲಾ ಪದಾಧಿಕಾರಿಗಳು ಸಮ್ಮುಖದಲ್ಲಿ ಹಸಿರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಹಾಜರಿದ್ದ ಸರ್ವರಿಗೂ ಗಿಡಗಳನ್ನು ವಿತರಿಸಲಾಯಿತು.
ನಗರಸಭಾ ಉಪಾಧ್ಯಕ್ಷರಾದ ಸೊಪ್ಪು ಗಣೇಶ್ ರವರು ಅಧಿಕೃತವಾಗಿ ಸಂಘವನ್ನು ಉದ್ಘಾಟನೆ ಮಾಡುವುದರ ಮೂಲಕ ಪತ್ರಿಕಾ ರಂಗ ಸರ್ಕಾರದ 4ನೇ ಅಂಗ ಸಮಾಜದ ಹಾಗುಹೋಗುಗಳನ್ನು ಗಮನಿಸಿ ನಿತ್ಯ ತಿದ್ದಿ ತೀಡಿ ಪತ್ರಿಕೆಗಳನ್ನ ಪ್ರಕಟಿಸಿ ಸಮಾಜದ ಉದ್ಧಾರಮಾಡುವ ಕೆಲಸಗಳನ್ನು ನಿರ್ವಹಿಸುವುದರಿಂದ ಸಮಾಜ ಸುಸ್ಥತಿಗೆ ಬರಲು ಪ್ರಮುಖ ಕಾರಣಕರ್ತರು ಎಂದು ತಮ್ಮ ಉದ್ಘಾಟನಾ ನುಡಿಗಳ ಹಾಡಿದರು.
ನಗರ ಸಭಾ ಸದಸ್ಯರಾದ ಯೋಗೇಶ್ ರವರು ಮಾತನಾಡುತ್ತಾ ದಿನನಿತ್ಯ ವರದಿಗಳನ್ನು ಬಿತ್ತರಿಸುತ್ತ ಆಯಾ ಮಾಸಗಳಲ್ಲಿ ಬರುವ ಶಿವಶರಣ ಜಯಂತಿಗಳನ್ನು ಆಚರಣೆ ಮಾಡಿ ಪತ್ರಿಕಾ ಜಯಂತಿಗಳು, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹೀಗೆ ಹಲವು ಕಾರ್ಯಕ್ರಮಗಳನ್ನ ಭಾಸ್ಕರ್ ಪತ್ರಿಕೆ ವತಿಯಿಂದ ಇದುವರೆಗೂ ನಡೆಸುತ್ತಾ ಬಂದಿರುವುದು ಕಲ್ಪತರು ನಾಡಿಗೆ ಹೆಮ್ಮೆತಂದಿದೆ ಹಾಗಾಗಿ ಇನ್ನು ಮುಂದೆ ಸಂಘದ ಮೂಲಕ ಅತ್ಯುತ್ತಮ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸಿದರು.
ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ತಾಲೂಕ ಘಟಕ ಪ್ರತಿ ವರ್ಷ ಹೊಸ ವರ್ಷದ ಡೈರಿ ಕ್ಯಾಲೆಂಡರ್ ಕಲ್ಪತರು ಗ್ರಾಮದಲ್ಲಿ ಬಿಡುಗಡೆಗೊಳಿಸುತ್ತಿರುವುದು. ಎಲೆಮರೆಕಾಯಿಯಂತಿರುವ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಪುರಸ್ಕರಿಸುತ್ತಿರುವುದು ರಾಷ್ಟ್ರೀಯ ಪತ್ರಿಕಾ ಸಮ್ಮೇಳನದಲ್ಲಿ ಭಾಗವಹಿಸಿ ನಿಷ್ಪಕ್ಷಪಾತವಾದ ವರದಿ ಮಂಡಿಸಿ ಸ್ಥಳೀಯ ಶಾಸಕರು ಹಾಗೂ ಅಧಿಕಾರಿ ವರ್ಗದವರರಿoದ ಸೈಯೆ ನಿಸಿಕೊಂಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಕಡು ಬಡವರಿಗೆ ಆಹಾರ ಕಿಟ್, ಆರೋಗ್ಯದ ಕಿಟ್ ಗಳನ್ನು ಸಂಗ್ರಹಿಸಿ ವಿತರಿಸಿ,ಶಾಲಾ ಮಕ್ಕಳಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಲಾಯಿತು..
ತಾಲೂಕು ಘಟಕದ ಮೂಲಕ ಕಲ್ಪತರು ಗ್ರಾಂಡ್ ನಲ್ಲಿ "ನಮ್ಮೂರ ಸನ್ಮಾನ" ಎಂಬ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧನೆಗೆ ಗಣ್ಯರಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತು . ಈ ಸಂದರ್ಭದಲ್ಲಿ ಪ್ರಿಂಟ್ ಮೀಡಿಯಾಗೋ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ಸಿಡಿ ಕೃಷ್ಣಮೂರ್ತಿ ಅವರು ಭಾಗವಹಿಸಿ ತಾಲೂಕು ಪದಾಧಿಕಾರಿಗಳ ಶ್ರಮ ಸಾಧನೆಯಿಂದ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು ಪತ್ರಕರ್ತರಿಗೆ ಯಾವುದೇ ಸ್ವಂತ ಆದಾಯಗಳಿಲ್ಲ ನಿಸ್ವಾರ್ಥ ಸೇವೆ ಸಲ್ಲಿಸಬೇಕು ಸರ್ಕಾರ ಈ ಕಡೆ ಗಮನ ಹರಿಸಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು ಬಸ್ ಪಾಸು, ನಿವೇಶನ ಉಚಿತ ವಾಹನ ಮಕ್ಕಳಿಗೆ ಉಚಿತ ಶಿಕ್ಷಣ, ಹತ್ತು ಹೀಗೆ ಹಲವು ಬೇಡಿಕೆಗಳನ್ನು ಪತ್ರಕರ್ತರು,ಪತ್ರಕರ್ತರ ಕುಟುಂಬ ಒತ್ತಾಯಿಸುತ್ತ ಬಂದಿದೆ.. ಇವುಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಬೇಕಾದ ಕರ್ತವ್ಯ ಸರ್ಕಾರದ್ದಾಗಿದೆ ಎಂದು ಗೌರವ ಸಲಹೆಗಾರದಂತಹ ಎಲ್ ಮ್ ವೆಂಕಟೇಶ್ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ನಮ್ಮ ತಿಪಟೂರಿನ ಮಾಜಿ ಶಿಕ್ಷಣ ಸಚಿವರು ಆದ ಬಿ ಸಿ ನಾಗೇಶ್, ಹಾಲಿ ಶಾಸಕರಾದ ಕೆ ಷಡಕ್ಷರಿ ಅವರು, ಪ್ರಸಿದ್ಧ ವೈದ್ಯರಾದ ಕುಮಾರ ಆಸ್ಪತ್ರೆಯ ಡಾ. ಶ್ರೀಧರ, ಸಾರ್ವಜನಿಕ ಆಸ್ಪತ್ರೆಯ ಹೃದಯ ರೋಗ ತಜ್ಞರಡಾ. ರಕ್ಷೀತ್ ಗೌಡ, ಆಯುರ್ವೇದ ವೈದ್ಯರಾದ ಡಾ. ಸಂಜಯ್, ಹಿರಿಯ ಪತ್ರಕರ್ತರು ಆಗೂ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದಂತಹ ಸೋಮಣ್ಣ, ಕಸಾಪ ಕೋಶ್ಯಾಧ್ಯಕ್ಷರಾದ ಮಡೇನೂರು ಸೋಮಣ್ಣನವರು, ತಾಲೂಕು ದಂಡಾಧಿಕಾರಿಗಳಾದ ಮೋಹನ್ ಸಾರ್ ಗ್ರೇಡ್ ಟು ತಹಸಿಲ್ದಾರ್ ಆದಂತಹ ಜಗನ್ನಾಥ್, ಹಿರಿಯ ನಾಗರಿಕರಾದ ಎಲ್ಐಸಿ ಜಯದೇವಪ್ಪ ಭೂಸ ರಾಜಣ್ಣ ಮಾದಿಹಳ್ಳಿ ಜಯಣ್ಣ, ಲಿಂಗದಳ್ಳಿ ಗಂಗಾಧರ್, 2026 -27ನೇ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಬೆಣ್ಣೆನಹಳ್ಳಿ ರಾಜು, ಪದಾಧಿಕಾರಿಗಳು ಮುಖಂಡರುಗಳು,ಕನ್ನಡ ರಕ್ಷಣೆಯ ವೇದಿಕೆ ಎಲ್ಲ ಸದಸ್ಯರುಗಳು ತಿಪಟೂರು ತಾಲೂಕಿನ ಎಲ್ಲಾ ಅಧಿಕಾರಿ ವೃಂದ ಹಾಗು ಸಾರ್ವಜನಿಕ ಬಂಧುಗಳು ನಮ್ಮೆಲ್ಲ ಕಾರ್ಯಕ್ರಮಗಳಿಗೂ ಭಾಗವಹಿಸಿ ತನು ಮನ ಧನ ಸಹಕಾರದೊಂದಿಗೆ ತುಂಬಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ..
ದಿನಾಂಕ: 23.03.2026ರಂದು ನಡೆಯುತ್ತಿರುವ ಬೆಂಗಳೂರಿನ ಕೇಂದ್ರ ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೆ ನಮ್ಮ ತಿಪಟೂರು ತಾಲೂಕು ಘಟಕದ ವತಿಯಿಂದ ಸಂಪೂರ್ಣ ಯಶಸ್ವಿ ಆಗಲೆಂದು ಹೃತ್ಪೂರ್ವಕವಾದ ಧನ್ಯವಾದಗಳು ಅರ್ಪಿಸುತ್ತೇವೆ.
,"ರೈತಕವಿ'.ಡಾ. ಪಿ. ಶಂಕರಪ್ಪ ಬಳ್ಳೇಕಟ್ಟೆ. ತಿಪಟೂರು. ತುಮಕೂರು ಜಿಲ್ಲೆ.
ದೂರವಾಣಿ. 9480066029.

