ತುಮಕೂರು: ನಗರದ ವಿವಿಧ ಭಾಗಗಳಲ್ಲಿ ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹2.32 ಲಕ್ಷ ಮೌಲ್ಯದ ಒಟ್ಟು 10 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಮರಳೂರು ದಿಣ್ಣೆಯ ನಾಸೀಂ ಪಾಷ (18) ಮತ್ತು ಖಾದರ್ ನಗರದ ಮಹ್ಮದ್ ಅನೀಸ್ (18) ಎಂದು ಗುರುತಿಸಲಾಗಿದೆ. ಗಮನಾರ್ಹವೆಂದರೆ, ಬಂಧಿತ ಮಹ್ಮದ್ ಅನೀಸ್ ಸಶಸ್ತ್ರ ಮೀಸಲು ಪಡೆಯ (DAR) ನಿವೃತ್ತ ಎಆರ್ ಎಸ್ ಐ (ARSI) ಅವರ ಮೊಮ್ಮಗ ಎಂದು ತಿಳಿದುಬಂದಿದೆ.
ಆರೋಪಿಗಳಿಂದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 4 ಬೈಕ್ ಗಳು ಹಾಗೂ ಹೊಸ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 6 ಬೈಕ್ ಗಳು ಸೇರಿದಂತೆ ಒಟ್ಟು 10 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ತಿಲಕ್ ಪಾರ್ಕ್ ಸಿಪಿಐ ಎಫ್.ಕೆ. ನದಾಫ್, ಪಿಎಸ್‌ಐಗಳಾದ ಎನ್. ಮೋಹನ್, ಎಚ್. ಮಂಜುನಾಥ್, ಜಿ. ಚೇತನ್ ಕುಮಾರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
The post ತುಮಕೂರಿನಲ್ಲಿ ಬೈಕ್ ಕಳ್ಳರ ಬಂಧನ; 10 ದ್ವಿಚಕ್ರ ವಾಹನಗಳ ಜಪ್ತಿ appeared first on nammatumakuru.
from nammatumakuru https://ift.tt/wk8FTE4
