ತುಮಕೂರು: ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಪುನರ್ ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಕರ್ನಾಟಕ ಗ್ರಾಮ ಸ್ವರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲೆಯ ಒಟ್ಟು ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಯನ್ನು 5,338ಕ್ಕೆ ನಿಗದಿಪಡಿಸಿ, ಗೆಜೆಟ್ ನಲ್ಲಿ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹಿಂದಿನ ಅವಧಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಸಂಖ್ಯೆಯಲ್ಲಿ ಒಂದು ಇಳಿಕೆಯಾಗಿದೆ. ಜಿಲ್ಲೆಯ ಒಟ್ಟು ಗ್ರಾ.ಪಂ ಸಂಖ್ಯೆ 330ರಿಂದ 329ಕ್ಕೆ ಇಳಿದಿದೆ. ಇದಕ್ಕೆ ಪ್ರಮುಖ ಕಾರಣ ಕೊರಟಗೆರೆ ಪಟ್ಟಣಕ್ಕೆ ಹೊಂದಿಕೊಂಡಿದ್ದ ಹುಲಿಕುಂಟೆ ಗ್ರಾಮ ಪಂಚಾಯಿತಿಯನ್ನು ರದ್ದುಗೊಳಿಸಿರುವುದು. ಈ ಪಂಚಾಯಿತಿಯ ಕೆಲವು ಗ್ರಾಮಗಳನ್ನು ನೂತನ ಕೊರಟಗೆರೆ ಪುರಸಭೆಗೆ ಸೇರಿಸಲಾಗಿದ್ದು, ಉಳಿದ ಗ್ರಾಮಗಳನ್ನು ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯೊಂದಿಗೆ ವಿಲೀನಗೊಳಿಸಲಾಗಿದೆ.
ತುಮಕೂರು ತಾಲ್ಲೂಕು: ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 41 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ಇಲ್ಲಿ ಒಟ್ಟು 746 ಸದಸ್ಯರನ್ನು ನಿಗದಿಪಡಿಸಲಾಗಿದೆ. ಮೈದಾಳ ಗ್ರಾ.ಪಂ ಅತಿ ಹೆಚ್ಚು (31) ಸದಸ್ಯರನ್ನು ಹೊಂದಿದ್ದರೆ, ಸೋರೆಕುಂಟೆ ಅತಿ ಕಡಿಮೆ (12) ಸದಸ್ಯರನ್ನು ಹೊಂದಿದೆ.
ಶಿರಾ ತಾಲ್ಲೂಕು: 42 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 660 ಸದಸ್ಯ ಸ್ಥಾನಗಳಿವೆ. ಇಲ್ಲಿನ ತಾಳಗುಂದ ಗ್ರಾಮ ಪಂಚಾಯಿತಿಯು ಕೇವಲ 11 ಸದಸ್ಯರನ್ನು ಹೊಂದಿದ್ದು ಜಿಲ್ಲೆಯಲ್ಲೇ ಅತಿ ಕಡಿಮೆ ಸದಸ್ಯ ಬಲ ಹೊಂದಿದ ಪಂಚಾಯಿತಿಯಾಗಿದೆ.
ತಿಪಟೂರು ತಾಲ್ಲೂಕು: 26 ಗ್ರಾ.ಪಂ, 419 ಸದಸ್ಯರು.
ತುರುವೇಕೆರೆ ತಾಲ್ಲೂಕು: 27 ಗ್ರಾ.ಪಂ, 401 ಸದಸ್ಯರು.
ಕೊರಟಗೆರೆ ತಾಲ್ಲೂಕು: ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ 23 ಗ್ರಾಮ ಪಂಚಾಯಿತಿಗಳನ್ನು ಹೊಂದಿದ್ದು, 369 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಸದ್ಯ ಪ್ರಕಟವಾಗಿರುವುದು ಕರಡು ಪಟ್ಟಿಯಾಗಿದ್ದು, ಯಾವುದೇ ಗಂಭೀರ ಆಕ್ಷೇಪಣೆಗಳು ಬಾರದಿರುವ ಹಿನ್ನೆಲೆಯಲ್ಲಿ ಇದೇ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಮೇ ತಿಂಗಳ ಮೊದಲ ವಾರದಲ್ಲಿ ಅಧಿಕೃತ ಅಂತಿಮ ಪಟ್ಟಿ ಹೊರಬೀಳಲಿದೆ ಎಂದು ವರದಿಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
The post ತುಮಕೂರು: ಜಿಲ್ಲೆಯ ಗ್ರಾ.ಪಂ. ಸದಸ್ಯರ ಸಂಖ್ಯೆ 5,338ಕ್ಕೆ ನಿಗದಿ; ಗೆಜೆಟ್ ನಲ್ಲಿ ಕರಡು ಪಟ್ಟಿ ಪ್ರಕಟ appeared first on nammatumakuru.
from nammatumakuru https://ift.tt/Tt6VsSa
