ಬಜ್ಪೆ: ಬಡತನವನ್ನು ಮೆಟ್ಟಿ ನಿಂತು SSLC ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನ

ಭಾಸ್ಕರ ಪತ್ರಿಕೆ
0

ಬಜ್ಪೆ: 2025–2026ನೇ ಸಾಲಿನ SSLC ಪರೀಕ್ಷೆಯಲ್ಲಿ ಬಡತನದ ನಡುವೆಯೂ ಅತ್ಯುತ್ತಮ ಅಂಕಗಳೊಂದಿಗೆ ಸಾಧನೆ ಮಾಡಿದ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ) ಎಕ್ಕಾರು ಗ್ರಾಮ ಶಾಖೆಯ ವತಿಯಿಂದ ಅಭಿನಂದಿಸಲಾಯಿತು.

ಸಾಧಕ ವಿದ್ಯಾರ್ಥಿನಿಯರು:

ಕು! ಕೃತಿಕಾ: ಮಂಜುಳಾ ಕೆಂಚಗುಡ್ಡೆ ಅವರ ಪುತ್ರಿ (508 ಅಂಕಗಳು)

ಕು! ರೇಷ್ಮಾ ಕೆ.: ಕರ್ಣ ಮತ್ತು ವಿನೋದಾ ದಂಪತಿಯ ಪುತ್ರಿ (502 ಅಂಕಗಳು)

ಕಡು ಬಡತನದ ಹಿನ್ನೆಲೆಯಿದ್ದರೂ, ಪಟ್ಟುಬಿಡದ ಪರಿಶ್ರಮದಿಂದ ಇಬ್ಬರೂ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಈ ಅಪೂರ್ವ ಸಾಧನೆಯನ್ನು ಗುರುತಿಸಿ ಡಿ.ಎಸ್.ಎಸ್ ಸಂಘಟನೆಯು ವಿದ್ಯಾರ್ಥಿನಿಯರನ್ನು ಆತ್ಮೀಯವಾಗಿ ಗೌರವಿಸಿತು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು, ಗ್ರಾಮ ಸಂಚಾಲಕ ಗಣೇಶ್ ಕೆಂಚಗುಡ್ಡೆ, ಮಹಿಳಾ ಸಂಚಾಲಕಿ ಸೌಮ್ಯ ಸುರೇಶ್, ಎಕ್ಕಾರು ಗ್ರಾ.ಪಂ. ಗ್ರಂಥಾಲಯದ ಗ್ರಂಥಪಾಲಕಿ ಹೇಮಲತಾ ಶರ್ಮಾ, ಹಾಗೂ ಮಂಗಳೂರು ತಾಲೂಕು ಸಂಘಟನಾ ಸಂಚಾಲಕ ಕೃಷ್ಣ ಕೆ. ಉಪಸ್ಥಿತರಿದ್ದರು.

ಜೊತೆಗೆ ಗ್ರಾಮ ಪದಾಧಿಕಾರಿಗಳಾದ ಪರಮೇಶ್ವರ, ವಾಸು, ಸುದರ್ಶನ್, ಮಂಜುನಾಥ, ಸುರೇಶ್, ಪುರುಷೋತ್ತಮ, ಯಮುನಾ, ಸಂಧ್ಯಾ ವಾಸು, ಜಯಂತಿ ಗಣೇಶ್, ಉದಯ, ಕರ್ಣ, ಮಂಜುಳಾ, ವಿನೋದ ಕರ್ಣ, ವಿಜಯಾ ವಸಂತ ಮತ್ತು ಮಕ್ಕಳು ಭಾಗವಹಿಸಿ ಸಾಧಕರಿಗೆ ಶುಭ ಹಾರೈಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

The post ಬಜ್ಪೆ: ಬಡತನವನ್ನು ಮೆಟ್ಟಿ ನಿಂತು SSLC ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನ appeared first on Mahanayaka.



from Mahanayaka https://ift.tt/bfiXC2E

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*