ಭಾರತದ ಜ್ಞಾನಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು: ನ್ಯಾಯಮೂರ್ತಿ ವಿ.ಶ್ರೀಶಾನಂದ

ಭಾಸ್ಕರ ಪತ್ರಿಕೆ
0
India's heritage of knowledge should be a beacon for the world: Justice V. Srishananda




ಭಾರತದ ಜ್ಞಾನಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು: ನ್ಯಾಯಮೂರ್ತಿ ವಿ.ಶ್ರೀಶಾನಂದ

ಬೆಂಗಳೂರು: ಒಂದೊಂದು ಕಲ್ಲಿನಲ್ಲು ನಮ್ಮ ನಾಡಿನ ಭವ್ಯ ಇತಿಹಾಸ ಅಡಗಿದ್ದು, ಭಾರತದ ಜ್ಞಾನ ಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದ್ದಾರೆ.
ಎ.ಪಿ.ಎಸ್‌ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳನ್ನು ಉದ್ಘಾಟಿಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿದ ಅವರು, ಶಿಕ್ಷಣಕ್ಕೂ, ವ್ಯಕ್ತಿ ಅಕ್ಷರ ಕಲಿಯಲಿಯುವುದಕ್ಕೂ ವ್ಯತ್ಯಾಸವಿದೆ. ಅಕ್ಷರ ಕಲಿತವರೆಲ್ಲ ವಿದ್ಯಾವಂತರಲ್ಲ. ಜಗತ್ತಿನ ಹಲವು ದೇಶಗಳು ನಾಗರಿಕತೆಯನ್ನು ಮೈಗೂಡಿಸಿಕೊಳ್ಳದಿದ್ದಾಗ ನಮ್ಮ ದೇಶ ಶಿಕ್ಷಣ ಕೇಂದ್ರಗಳನ್ನು ಹೊಂದಿತ್ತು. ಇದಕ್ಕೆ ನಳಂದ ವಿಶ್ವವಿದ್ಯಾಲಯ ನಿದರ್ಶನ ಎಂದರು.
200 ವರ್ಷಗಳ ಬ್ರಿಟೀಷ್ ಆಳ್ವಿಕೆಯಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡೆವು. ಆದರೆ ಭಾರತದ ಮೆದಳುಗಳಿಗೆ ಸಾವಿಲ್ಲ, ಅದು ಎಂದಿಗೂ ಸಾಯುವುದಿಲ್ಲ. ನಮ್ಮ ಜ್ಞಾನ ಪರಂಪರೆ ಮತ್ತೆ ವೈಭವತ್ತ ಸಾಗಬೇಕು ಎಂದರು.
ಎ.ಪಿ.ಎಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿಎ.ಡಾ.ವಿಷ್ಣುಭರತ್‌ ಅಲಂಪಲ್ಲಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ.ಎ.ಪ್ರಕಾಶ್‌, ಪಿ.ಯು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಟಿ.ವಿ.ಗುರುದೇವಯ್ಯ, ಕಾಲೇಜಿನ ಪ್ರಾಂಶುಪಾಲರಾದ ಎಸ್.ನಾಗರಾಜ್, ಉಪ ಪ್ರಾಂಶುಪಾಲರಾದ ಹೆಚ್.ಎಸ್.ರಂಜನಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ನಿವೇದಿತ.ಬಿ.ಎಂ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

The post ಭಾರತದ ಜ್ಞಾನಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು: ನ್ಯಾಯಮೂರ್ತಿ ವಿ.ಶ್ರೀಶಾನಂದ appeared first on Kalyanasiri.



from Kalyanasiri https://ift.tt/IP1piXL<

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*