ತುಮಕೂರು: ಫಾರ್ಮಸಿ ಕ್ಷೇತ್ರದಲ್ಲಿ ವೃತ್ತಿಪರ ಶಿಕ್ಷಣ ಅಭ್ಯಾಸ ಮಾಡುವ ಆಸಕ್ತಿ ಹೊಂದಿರುವ ಆರ್ಥಿಕವಾಗಿ ಹಿಂದುಳಿದ, ಅಂಗವಿಕಲರಿಗೆ, ಅಥವಾ ಒಬ್ಬರೇ ಪೋಷಕರು, ಅನಾಥ ವಿದ್ಯಾರ್ಥಿಗಳಿಗೆ ಉಚಿತ ಡಿ.ಫಾರ್ಮ್ ಪಡೆಯುವ ಅವಕಾಶವನ್ನು ತುಮಕೂರಿನ ಮಯೂರ ಕಾಲೇಜು ಆಫ್ ಫಾರ್ಮಸಿ ಕಲ್ಪಿಸಿದೆ.
ಈ ಯೋಜನೆಯಲ್ಲಿ 30 ವಿದ್ಯಾರ್ಥಿಗಳಿಗೆ ಸಂಪೂರ್ಣ ಬೋಧನಾ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಮೇಲೆ ತಿಳಿಸಿದ ಅರ್ಹ ವಿದ್ಯಾರ್ಥಿಗಳು ಕೇವಲ ಪರೀಕ್ಷಾ ಮಂಡಳಿ ಶುಲ್ಕ ಹಾಗೂ ಇತರೆ ಕನಿಷ್ಠ ಕಡ್ಡಾಯ ಶುಲ್ಕಗಳನ್ನು ಮಾತ್ರ ಭರಿಸಬೇಕಾಗುತ್ತದೆ. ಅಂದರೆ ವಾರ್ಷಿಕವಾಗಿ ಸುಮಾರು ಆರರಿಂದ ಏಳು ಸಾವಿರದವರೆಗೆ ಮಾತ್ರ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ಡಿ.ಫಾರ್ಮ್ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಆಗಿದ್ದು, ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಯಿಂದ ಮಾನ್ಯತೆ ಪಡೆದಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಸಂಬಂಧಪಟ್ಟ ವಿದ್ಯಾರ್ಥಿಗಳು ಮತ್ತು ಪೋಷಕರು 9480150808 ಮೊಬೈಲ್ ನಂಬರಿಗೆ ಕರೆ ಮಾಡಬಹುದು, ಅಥವಾ ತುಮಕೂರಿನ ಆರ್.ಟಿ.ನಗರದಲ್ಲಿರುವ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
The post ತುಮಕೂರು: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಡಿ.ಫಾರ್ಮ್ ಓದುವ ಅವಕಾಶ appeared first on nammatumakuru.
from nammatumakuru https://ift.tt/GOeHyKq
