ರೈಲ್ವೆ ಅಂಡರ್ ಪಾಸ್ ಗೆ ನುಗ್ಗಿದ ನೀರು: ಸಮಸ್ಯೆ ಅರಿತ ಅರಸೀಕೆರೆ ಅಸಿಸ್ಟೆಂಟ್ ಡಿವಿಜನ್ ಇಂಜಿನಿಯರ್ ಕೂಡಲೇ ಸಮಸ್ಯೆಗೆ ಪರಿಹಾರ

ಭಾಸ್ಕರ ಪತ್ರಿಕೆ
0



ತಿಪಟೂರು: ಕರಡಿ ಸ್ಟೇಷನ್, ಕುಪ್ಪಾಳು ಗ್ರಾಮದಲ್ಲಿರುವ ಹಾದು ಹೋಗುವ ರೈಲ್ವೆ ಅಂಡರ್ ಪಾಸ್ (ಬ್ರಿಡ್ಜ್) ಬಳಿ ಬಹಳ ದಿನಗಳಿಂದ ಅಂಡರ್ ಪಾಸ್ ಒಳಗಿಂದ ನೀರು ನಿರಂತರವಾಗಿ ಹರಿದು ಹೋಗುತ್ತಿದ್ದು, ಮಳೆಗಾಲದಲ್ಲಿ ಇಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದ್ದು, ಪಕ್ಕದಲ್ಲಿರುವ ಚರಂಡಿಯಲ್ಲಿ, ಗಿಡಗೆಂಟೆಗಳು ಬೆಳೆದು ಸುಗಮವಾಗಿ ನೀರು ಹರಿಯಲು ಸಾಧ್ಯವಾಗದೆ, ಈ ಅಂಡರ್ ಪಾಸ್ ನಲ್ಲಿ ನೀರು ನಿಂತು, ಸಾರ್ವಜನಿಕ ಸಂಚರಿಸಲು ಬಹಳ ಕಷ್ಟ ಸಾಧ್ಯವಾಗುತ್ತಿತ್ತು, ಇದನ್ನು ಅರಿತ ಅರಸೀಕೆರೆ ಅಸಿಸ್ಟೆಂಟ್ ಡಿವಿಜನ್ ಇಂಜಿನಿಯರ್ ಅಧಿಕಾರಿಯು ಭೇಟಿಕೊಟ್ಟು ಕೂಡಲೇ ಈ ಸಮಸ್ಯೆಯನ್ನು ಪರಿಹರಿಸುವಂತೆ ಆದೇಶಿಸಿದ್ದು, ಸ್ಥಳದಲ್ಲಿ ಗಿಡಗಂಟೆಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಜೆಸಿಬಿ ಯು ಕೆಲಸ ನಿರ್ವಹಿಸುತ್ತಿದ್ದು, ಕರಡಿ ರೈಲ್ವೆ ಮೇಸ್ತ್ರಿ ಮಂಜುನಾಥ್, ರೈಲ್ವೆ ಕಾರ್ಮಿಕ ಸುಂದರರಾಜ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*