ಅಯೋಧ್ಯೆಯ ಶ್ರೀ ಬಾಲರಾಮ ಪ್ರತಿಷ್ಠಾಪನೆಗೊಂದು ಇಂದಿಗೆ 1ವರ್ಷ ಪೂರ್ಣಗೊಂಡಿದೆ, ರಾಮಲಲ್ಹಾನ ಪೂಜೆಯನ್ನು 2024ರ ಜನವರಿ 11ರ ಮೊದಲದಿನ ದ್ವಾದಶಿಯ ಅರಂಭದಂದು ಪ್ರತಿಷ್ಠಾಪನೆ ಆರಂಭವಾಗಿ ಪಂಚಾಮೃತ ಮತ್ತು ಸರಯೂ ಜಲದ ಅಭಿಷೇಕವನ್ನು ಒಳಗೊಂಡಂತೆ, ಶ್ರೀ ಬಾಲರಾಮನ ಶಿಲೆಗೆ ಚಿನ್ನ-ಬೆಳ್ಳಿಯ ಎಲೆಗಳು, ದೆಹಲಿಯಲ್ಲಿ ತಯಾರಾದ ವಿಶಿಷ್ಠವಾದ ಪಿತಾಂಬರಿಯ ಅಲಂಕಾರದ ಬಳಿಕ, 3ದಿನಗಳ ಕಾಲ ಮಂಟಪ ಮತ್ತು ಯಜ್ಞಶಾಲೆಯಲ್ಲಿ ವಿವಿಧ ವಿಧಾನಗಳ ಹೋಮಗಳು, ಶಾಸ್ತ್ರೀಯ ಸಾಂಸ್ಕೃತಿಕ ಪ್ರವಚನಗಳು ನಡೆದವು.
ಇಂದು ತಿಪಟೂರಿನ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ್ ಸರ್ಕಲ್) ಬಳಿಯಿರುವ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ಶ್ರೀ ರಾಮನ ಪರಮ ಭಕ್ತರಾದ, ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್ ನೇತೃತ್ವದಲ್ಲಿ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀ ರಾಮನ ಕೃಪಾ-ಕಟಾಕ್ಷಕ್ಕೆ ಪಾತ್ರರಾದರು.
ಈ ಸಂದರ್ಭದಲ್ಲಿ ಲತಾ ಸುಂದರ್, ಅರುಣ್, ಭೂಷಣ್, ರಮೇಶ್ ಹಾಗೂ ಶ್ರೀ ರಾಮನ ಭಕ್ತರುಗಳು ಇದ್ದರು.
