ಸ್ವಾಮಿ ವಿವೇಕಾನಂದರ 168ನೇ ಜಯಂತಿ (ಯುವ ದಿನ) ಆಚರಣೆ

ಭಾಸ್ಕರ ಪತ್ರಿಕೆ
0


ತಿಪಟೂರು: ಇಂದು  ತಾಲೂಕಿನ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಮತ್ತು ಭಾಸ್ಕರ್ ಪತ್ರಿಕಾ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದರ 168ನೇ ಜಯಂತಿ (ಯುವ ದಿನ)ವನ್ನು ಹಾಸನ ವೃತ್ತದಲ್ಲಿರುವ ಭಾಸ್ಕರ ಪತ್ರಿಕೆ ಕಚೇರಿಯಲ್ಲಿ ಆಚರಿಸಲಾಯಿತು, ಈ ಸಂದರ್ಭದಲ್ಲಿ ಭಾಸ್ಕರ ಪತ್ರಿಕೆ ಸಂಪಾದಕರಾದ ಡಾ.ಭಾಸ್ಕರ್ ಅವರು ಮಾತನಾಡಿ ಈ ದೇಶದಲ್ಲಿರುವ ಎಲ್ಲಾ ಕಂಟಕಗಳಿಗೆ ಅದು ಯುವ ಜನತೆಯ ಅದಮ್ಯ ಯುವ ಶಕ್ತಿಯಿಂದ ಮಾತ್ರ, ಯುವಶಕ್ತಿಯನ್ನು ಹೊಡೆದೆಬ್ಬಿಸಿ ಜಾಗೃತಗೊಳಿಸಿ ಕಾರ್ಯಾನಮುಖರಾಗುವಂತೆ ಮಾಡಬೇಕು ಯುವಶಕ್ತಿಯೇ ದೇಶದ ಸಂಪತ್ತು ಆಗಬೇಕು ಸ್ವಾಮಿ ವಿವೇಕಾನಂದರ ಘೋಷವಾಕ್ಯವಾದ ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬ ಘೋಷವಾಕ್ಯವನ್ನು ಎಲ್ಲ ಯುವಕರು ಅನುಸರಿಸಬೇಕು ಎಂದರು ಇದೇ ಸಂದರ್ಭದಲ್ಲಿ ಭಾಸ್ಕರ್ ಪತ್ರಿಕೆ ಯ ಸಂಪಾದಕರಾದ ಡಾ.ಭಾಸ್ಕರ್,   ಜನರ ಒಡನಾಡಿ ಪತ್ರಿಕೆಯ ಪತ್ರಕರ್ತರಾದ ಟಿ ರಾಜು ಬೆಣ್ಣೆನಹಳ್ಳಿ, ಜಯದೇವಪ್ಪ ಎಲ್ಐಸಿಯ ನಿವೃತ್ತ ಅಧಿಕಾರಿ, ರಮೇಶ್ ವಾಣಿಜ್ಯೋದ್ಯಮಿ, ಶ್ರೀಮತಿ ನಂದಿನಿ ಮತ್ತು ಅವರ ಪುತ್ರ ಭಾಗವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*