ತಿಪಟೂರು: ಬೆಸ್ಕಾಂ ಉಪವಿಭಾಗದ ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬೀದಿ ದೀಪಗಳಿಗೆ ಕಂಟ್ರೋಲ್ ವೈರ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಫೆ.8ರಿಂದ 21ರವರೆಗೆ ತಿಪಟೂರು ನಗರದಾದ್ಯಂತ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಗಾಗ್ಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಸಾರ್ವಜನಿಕರು, ಗ್ರಾಹಕರು ಬೆಸ್ಕಾಂ ಜೊತೆ ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

