ತಾಲೂಕು ಆಡಳಿತ ವತಿಯಿಂದ ಫೈನಾನ್ಸ್ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ

ಭಾಸ್ಕರ ಪತ್ರಿಕೆ
0



ತಿಪಟೂರು: ಇಂದು  ತಾಲೂಕು ಆಡಳಿತ ವತಿಯಿಂದ ತಾಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರದ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಮತ್ತು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳೊಂದಿಗೆ ಸಭೆ ನಡೆಸಲಾಯಿತು, ಈ ಸಭೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋಫೈನಾನ್ಸ್ ರವರ ದೌರ್ಜನ್ಯ-ದಬ್ಬಾಳಿಕೆ ಕುರಿತಂತೆ ಹಲವಾರು ವಿಚಾರ ಚರ್ಚೆ ನಡೆಸಲಾಯಿತು, ಆರ್‌ಬಿಐ ನಿಯಮಾನುಸಾರವಾಗಿ ಕೆಲಸ ನಿರ್ವಹಿಸಲು ಫೈನಾನ್ಸ್ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಯಿತು ಕಾನೂನು ಬಹಿರವಾಗಿ ಸಾಲ ವಸೂಲಾತಿ ಮಾಡುವ ನೆಪದಲ್ಲಿ ಸಾರ್ವಜನಿಕ ವಾಗಿ ಅವಮಾನ ಮಾಡುವುದು

ಎದುರಿಸುವುದು ಅಶ್ಲೀಲ ಪದ ಬಳಸುವುದು ಸಾಲ ಈಗಲೇ ಇoದೇ ಸಾಲ ಕಟ್ಟಬೇಕೆಂದು ಒತ್ತಾಯಪೂರ್ವಕವಾಗಿ ಜನ ಜನಗಳನ್ನು ಬೆದರಿಸುವುದು ದೌರ್ಜನ್ಯವೆಸುಗುದು ಕಂಡು ಬಂದಲ್ಲಿ ನಿಮ್ಮಗಳ ಮೇಲೆ ನಿರ್ದಾಕ್ಷಣವಾಗಿ ಕಾನೂನು ಕ್ರಮ ಜರುಗಿಸಿ ಜೈಲಿಗೆ ಕಳಿಸುವುದಾಗಿ ಪೊಲೀಸ್ ಇಲಾಖೆಯಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ ಇದೇ ಸಂದರ್ಭದಲ್ಲಿ ತಾಲೂಕ್ ದಂಡಾಧಿಕಾರಿಗಳು ಮಾತನಾಡಿ ಕಾನೂನುಬಾಹಿರವಾಗಿ ನಮ್ಮ ತಾಲೂಕಿನಲ್ಲಿ ಚಟುವಟಿಕೆಗಳು ಕಂಡು ಬಂದಲ್ಲಿ ನಿಮ್ಮಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*