ಮಾಸ್ಕ್ ಧರಿಸಿ ಲೈಂಗಿಕ ಕ್ರಿಯೆ: ವಿಡಿಯೋ ಲೈವ್ ಮಾಡಿದ ದಂಪತಿ ಅರೆಸ್ಟ್

ಭಾಸ್ಕರ ಪತ್ರಿಕೆ
0

ಹೈದರಾಬಾದ್:  ಸೆಕ್ಸ್ ವಿಡಿಯೋಗಳನ್ನು ಲೈವ್ ಸ್ಟ್ರೀಮ್ ಮಾಡಿದ ಆರೋಪದಲ್ಲಿ ದಂಪತಿಯನ್ನು ಬಂಧಿಸಿರುವ ಘಟನೆ  ಹೈದರಾಬಾದ್ ನ ಅಂಬರ್ ಪೇಟೆಯ ಮಲ್ಲಿಕಾರ್ಜುನ ನಗರದಲ್ಲಿ ನಡೆದಿದೆ.

14 ವರ್ಷದ ಪತಿ ಹಾಗೂ 37 ವರ್ಷದ ಪತ್ನಿ ಬಂಧಿತ ಆರೋಪಿಗಳಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಹೈಡೆಫಿನಿಷನ್ ಕ್ಯಾಮರಾಗಳು ಸೇರಿದಂತೆ ಇತರ ಉಪಕರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ಪ್ರಕಾರ ಸುಲಭವಾಗಿ ಹಣಗೊಳಿಸುವ ಮಾರ್ಗವಾಗಿ ದಂಪತಿಗಳು ಈ ಕೃತ್ಯದಲ್ಲಿ ತೊಡಗಿದ್ದರು. ಪತಿ ಕ್ಯಾಬ್ ಚಾಲಕನಾಗಿ ದುಡಿಯುತ್ತಿದ್ದ ಎಂದು ತಿಳಿದು ಬಂದಿದೆ.

ದಂಪತಿಗಳು ಮಾಸ್ಕ್ ಧರಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡು ದೃಶ್ಯವನ್ನು ಆ್ಯಪ್ ಬಳಕೆದಾರರೊಂದಿಗೆ ಲೈವ್ ಸ್ಟ್ರೀಮ್ ಮತ್ತು ರೆಕಾರ್ಡ್ ಮಾಡಿಕೊಂಡು ಹಂಚಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ರೆಕಾರ್ಡ್ ಮಾಡಿರುವ ವಿಡಿಯೋ ಕ್ಲಿಪ್ ವೊಂದಕ್ಕೆ 500 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು.  ಈ ದಂಧೆಯಲ್ಲಿ ಈ ದಂಪತಿ ಸಾಕಷ್ಟು ಹಣಗಳಿಸಿದ್ದರು.

ಸದ್ಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*