ತಿಪಟೂರು: ಹಾಸನ ಸರ್ಕಲ್ ಶಿವಕುಮಾರ ಸ್ವಾಮೀ ವ್ರತ್ತ ಭಾಸ್ಕರ ಪತ್ರಿಕೆ ಕಚೇರಿಯ ಆವರಣದ ಹತ್ತಿರ ಕರ್ನಾಟಕ ಸರ್ಕಾರದ ವತಿಯಿಂದ ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಪಿ ಶಿವಸುಜ್ಞಾನಮೂರ್ತಿರವರು ಪ್ರಪ್ರಥಮ ಬಾರಿಗೆ ತಿಪಟೂರು ನಗರಕ್ಕೆ ಆಗಮಿಸಿದಾಗ ಭಾಸ್ಕರ್ ಪತ್ರಿಕೆ ಪ್ರಧಾನ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ಡಾಕ್ಟರ್ ಭಾಸ್ಕರ್ ಅವರ ನೇತೃತ್ವದಲ್ಲಿ ಅವರನ್ನು ಸ್ವಾಗತಿಸಿ ಬಿಎಚ್ ರಸ್ತೆಯಲ್ಲಿರುವ ಕಲ್ಪತರು ಗ್ರಾಂಡ್ ಹೋಟೆಲ್ ಗೆ ಸ್ವಾಗತಿಸಿ ತಿಪಟೂರು ತಾಲೂಕಿನ ವಿಶ್ವಕರ್ಮ ಸಮಾಜದ ವತಿಯಿಂದ ಅವರಿಗೆ ಗೌರವಿಸಿ ಮತ್ತು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯದ್ಯಕ್ಷರಾದ ಕನ್ನಡ ಸೋಮು, ಉಪಾಧ್ಯಕ್ಷರಾದ ಜಯಣ್ಣ, ಕಾರ್ಯದರ್ಶಿಗಳಾದ ದೇವೇಂದ್ರ ಚಾರ್, ಪತ್ರಕರ್ತರಾದ ಸತೀಶ್ ಮುಳ್ಳೂರು ಉಪಸ್ಥಿತರಿದ್ದರು, ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಅಧ್ಯಕ್ಷರು ಮಾತನಾಡಿ ನಾನು ನಮ್ಮ ವಿಶ್ವಕರ್ಮ ಸಮಾಜದಲ್ಲಿ ಏನೇ ತೊಂದರೆಗಳು ಬಂದಲ್ಲಿ ಅವನು ಸಾಧ್ಯವಾದಷ್ಟು ಮಟ್ಟಿಗೆ ಸರಿದೂಗಿಸುವ ವ್ಯವಸ್ಥೆ ನಿರ್ಮಾಣ ಮಾಡುತ್ತೇನೆ, ಮೊದಲು ವಿದ್ಯೆಗೆ ಆದ್ಯತೆ ನೀಡುತ್ತೇನೆ. ಕಲಿತ ಇಲ್ಲದಿರುವ ನಿರುದ್ಯೋಗಿಗಳಿಗೆ ಕೆಲಸ ನೀಡುವ ಬಗ್ಗೆ ಯೋಜನೆ ಕೈಗೊಳ್ಳುತ್ತೇನೆ, ನಮ್ಮ ಸಮಾಜದಲ್ಲಿ ಯಾವ ಯೋಜನೆಗಳು ಕೈ ತಪ್ಪದೇ ಎಲ್ಲ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ, ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಹಿತನುಡಿಗಳನ್ನು ನುಡಿದರು, ಈ ವೇಳೆ ಕಾರ್ಮಿಕ ಸಂಘದ ಅಧ್ಯಕ್ಷರಾದ ಸರ್ವೇಶಾಚಾರ್, ಕಂಟಾಚಾರ್, ಮಂಜುನಾಥಾಚಾರ್, ಗಿರೀಶ್ ಶುಭ ವಿಶ್ವಕರ್ಮ ಮುಂತಾದ ಸಮಾಜದ ಮುಖಂಡರು ಹಾಜರಿದ್ದರು.
