RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ

ಭಾಸ್ಕರ ಪತ್ರಿಕೆ
0

ರಾಷ್ಟೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ. 1925 ರ ವಿಜಯದಶಮಿಯಂದು ಆರಂಭಗೊಂಡ ಆರ್‌ಎಸ್‌ಎಸ್‌ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ.

ತಿಪಟೂರು: ವಿಜಯದಶಮಿ ಹಬ್ಬವಾದ ಇಂದು (ಗುರುವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯಾಗಿ 100 ವರ್ಷ ಪೂರೈಸಿದ್ದು, ಈ ನಡುವೆ ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ ಎಂದು ಆರ್ ಎಸ್ ಎಸ್ ಸಂಘ ಪರಿಹಾರದವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವಿದ್ಯಾನಗರ ವಸತಿಯಲ್ಲಿ ಪ್ರಮುಖರು ನೂರು ವರ್ಷಗಳ ಹೆಮ್ಮೆಯ ಪಯಣದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿ ಯವರು ಭಾರತಮಾತೆಯ ನಾಣ್ಯಗಳನ್ನು ಬಿಡುಗಡೆ ಮಾಡಿರುವುದಕ್ಕೆ ಅವರನ್ನ ರಾಷ್ಟ್ರೀಯ ಸ್ವಯಂಸೇವಕರು ಅಭಿನಂದಿಸಲಾಯಿತು.

ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ಸಂಘ ಸ್ಥಾಪನಾ ದಿನ ಮತ್ತು ಸಂಘ ಶತಾಬ್ದಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದೆ.

 100 ವರ್ಷಗಳ ಸೇವೆ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ,ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ವು, ಸ್ಥಾಪನೆಯಾದಾಗಿನಿಂದ 100 ವರ್ಷಗಳ ಈ ಹೆಮ್ಮೆಯ ಪಯಣದಲ್ಲಿ, ಸಂಘವು ಭಾರತೀಯ ಮೌಲ್ಯಗಳ ಆಧಾರದ ಮೇಲೆ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ನಿರಂತರವಾಗಿ ದುಡಿದಿದೆ. ಕೋಟ್ಯಂತರ ಸ್ವಯಂಸೇವಕರ ನಿಸ್ವಾರ್ಥ ಸೇವೆಗೆ ನಮ್ಮ ನಮನಗಳು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರು ಭಾಗವಹಿಸಿದ್ದರು.
ವರದಿ: ಮಂಜುನಾಥ್ ಡಿ ತಿಪಟೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*