ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಿಪಟೂರು ಹಾಗೂ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ

ಭಾಸ್ಕರ ಪತ್ರಿಕೆ
0
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಿಪಟೂರು ಹಾಗೂ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆಯನ್ನು ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪ ದಿನಾಂಕ 9-11.2025ನೇ ಭಾನುವಾರದಂದು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷರಾದ ಡಾಕ್ಟರ್ ಸಂಜಯ್ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾಕಷ್ಟು ರಕ್ತದ ಕೊರತೆ ಇದೆ. ಈ ಬೇಡಿಕೆಯನ್ನು ಹೋಗಲಾಡಿಸಲು ಯುವಶಕ್ತಿಯು ರಕ್ತದಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಕಾಯಿಲೆ ಹಾಗೂ ಇನ್ನಿತರ ಕಾಯಿಲೆಗಳನ್ನು ತಡೆಗಟ್ಟಬಹುದು. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ನ ಡಾ. ಸಂತೋಷ್ ಮಾತನಾಡಿ ಇಂದಿನ ದಿನಮಾನಗಳಲ್ಲಿ ಮನುಷ್ಯನು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು, ಕೆಲವರು ಪ್ರತಿಷ್ಠಿತರು ಅವರ ದೇಹದಲ್ಲಿ ಆರೋಗ್ಯ ಸಮಸ್ಯೆ ಇದ್ದರೂ ಸಹ ಮುಜುಗರ ಎಂದು ಭಾವಿಸಿಕೊಳ್ಳುತ್ತಾ ತಪಾಸಣೆ ಮಾಡಿಕೊಳ್ಳದೆ ರೋಗಗಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದು ಹಾಗಾಗಿ ಯಾವುದೇ ಮನಸ್ಸಿನಲ್ಲಿ ಆತಂಕಕ್ಕೆ ಒಳಗಾಗದೆ ನೇರವಾಗಿ ಬಂದು ಇಂತಹ ಉಚಿತ ತಪಾಸಣೆ ಹಾಗೂ ರಕ್ತದಾನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ತಿಂಗಳಿಗೊಮ್ಮೆ ಬಿ.ಪಿ. ಶುಗರ್ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ . ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗುವುದಕ್ಕಿಂತ ಕಾಯಿಲೆ ಬರುವುದಕ್ಕಿಂತ ಮೊದಲೇ ನಾವು ಆಸ್ಪತ್ರೆಗಳಿಗೆ ಭೇಟಿ ನೀಡಿ ತಮ್ಮ ಆರೋಗ್ಯ ತಮ್ಮ ಕೈಯಲ್ಲಿಟ್ಟುಕೊಳ್ಳಬೇಕು ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಡಾ! ಭಾಸ್ಕರ್ ರವರು ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ಒಂದು ಉತ್ತಮ ಸೇವೆಯನ್ನು ಮಾಡುತ್ತಿದೆ. ರಕ್ತದಾನ ಉಚಿತ ತಪಾಸಣಾ ಕಾರ್ಯಕ್ರಮವನ್ನ ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತ ಕಾರ್ಯಕ್ರಮ ಅತ್ಯ ಆಮೂಲ್ಯ. ಇಂತಹ ಉಚಿತ ತಪಾಸಣೆ ಹಾಗೂ ರತ್ನ ದಾನ ಕಾರ್ಯಕ್ರಮವನ್ನ ಡಾಕ್ಟರ್ ಸಂಜಯ್ ರವರು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮನುಷ್ಯನ ಆರೋಗ್ಯದ ಕಾಳಜಿಯಿಂದ ದೃಷ್ಟಿಯಿಂದ ರಕ್ತದಾನ ಉಚಿತ ತಪಾಸಣಾ ಕಾರ್ಯಕ್ರಮ ನಡೆಸಿದ್ದು ಕಲ್ಪತರ ನಾಡಿನ ಹೆಮ್ಮೆಯ ಸಂಗತಿ ಹಾಗಾಗಿ ಮನುಷ್ಯರು ದೇವಸ್ಥಾನಗಳಿಗೆ ಹೆಚ್ಚು ಹೋಗುತ್ತಾರೆ ಆದರೆ ಇಂತಹ ಉಚಿತ ತಪಾಸಣೆ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸದೆ. ಅನೇಕ ರೋಗಗಳಿಗೆ ತುತ್ತಾಗಿ ತಮ್ಮ ಜೀವನವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಉಚಿತ ಶಿಬಿರ ಕಾರ್ಯಕ್ರಮಗಳು ಎಂದು ಅನ್ಯತೆ ಭಾವಿಸದೆ ತಮ್ಮ ಆರೋಗ್ಯದ ಕಡೆ ಗಮನಕೊಟ್ಟು ಇಂತಹ ಕಾರ್ಯಕ್ರಮಗಳ ಭಾಗವಹಿಸಿ ತಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರು ಶಂಕ್ರಪ್ಪ ಮಾತನಾಡಿ ಆರೋಗ್ಯದ ಏರುಪೇರುಗಳ ಬಗ್ಗೆ ಮಾಹಿತಿ ನೀಡಿ. ಮನುಷ್ಯನಿಗೆ ಹಣ ಆಸ್ತಿ, ಒಡವೆ ಎಲ್ಲಾ ಇದ್ದರೂ ಸಹ ಆರೋಗ್ಯ ಇಲ್ಲವೆಂದರೆ ಅವೆಲ್ಲವೂ ಶೂನ್ಯ ಹಾಗಾಗಿ ಮನುಷ್ಯ ಮೊದಲು ಆರೋಗ್ಯಕರ ಕಡೆ ಗಮನ ಇರಲಿ ಎಂದರು.

ಡಾ. ಸಂಜಯ್ ಅಧ್ಯಕ್ಷತೆ ವಹಿಸಿದ್ದರು. ಈ ಶಿಬಿರದಲ್ಲಿ ಸಾರ್ವಜನಿಕರು ರಕ್ತದಾನ ಮಾಡಿದರು. ಡಾಕ್ಟರ್ ಸಂತೋಷ್ ಆಸ್ಪತ್ರೆಯ ವತಿಯಿಂದ ಅನೇಕರಿಗೆ ಉಚಿತ ತಪಾಸಣೆ ಮಾಡಲಾಯಿತು.
ಶ್ರೀಮತಿ ಶುಭ ವಿಶ್ವಕರ್ಮ ನವರು ಪ್ರಾರ್ಥನೆ ಮತ್ತು ನಿರೂಪಣೆ ಮಾಡಲಾಯಿತು.
ಟ್ವಿನ್ ಕಿಡ್ಸ್ ಸಂಸ್ಥೆಯಿಂದ ಮಧು ಮತ್ತು ಶಿವಾರೆಡ್ಡಿ, ಸನ್ ಫರ್ ನಿಂದ ಕಾರ್ತಿಕ್ ಮತ್ತು ಶಶಾಂಕ್, ಪೆರಾ ಮೆಡಿಕಲ್ ಕಾಲೇಜಿನ ಶಿವಯೋಗಿಶ್ವರ್, ಡಾಕ್ಟರ್ ನಂದಿನಿ, ಬೆಂಗಳೂರು ರೆಡ್ ಕ್ರಾಸ್ ಸಂಸ್ಥೆಯ ಡಾಕ್ಟರ್ ರೇಷ್ಮಾ, ರವಿ ಡಾಕ್ಟರ್, ಉಪಾಧ್ಯಕ್ಷರಾದ ಪೂರ್ಣಿಮಾ ವಕೀಲರು, ಕಾರ್ಯದರ್ಶಿ ಮಂಜುನಾಥ್, ಪತ್ರಕರ್ತರಾದ ಗಣೇಶ್ ಮತ್ತು ಮಂಜುನಾಥ್ ಡಿ ತಿಪಟೂರು,
ಉಪಸ್ಥಿತಿಯಲ್ಲಿದ್ದರೂ. 
ವರದಿ: ಮಂಜುನಾಥ್ ಡಿ ತಿಪಟೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*