ತಿಪಟೂರು: ಪತ್ರಕರ್ತರು ಹಾಗೂ ಸ್ನೇಹ ಅಭಿಮಾನಿಗಳ ಬಳಗದ ಸಂಯುಕ್ತಾಶ್ರದಲ್ಲಿ ಅಭಿನಂದನಾ ಸಮಾರಂಭವನ್ನು ತಿಪಟೂರು ತಾಲೂಕಿನ ಪ್ರಸಿದ್ಧ ಗ್ರಾಂಡ್ ಹೋಟೆಲ್ ಆವರಣದಲ್ಲಿ ಪ್ರಶಸ್ತಿಯನ್ನು ಪಡೆದ ಗೌರವಾನ್ವಿತ ಎಸ್ ಗಂಗಾಧರ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಭಿನಂದನಾ ಕಾರ್ಯಕ್ರಮದಲ್ಲಿ ಕ.ಸಾ.ಪ. ಅಧ್ಯಕ್ಷರಾದ ಮಡೆನೂರು ಸೋಮಶೇಖರ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ನವ ದೆಹಲಿಯ ಕೃಷಿ ಜಾಗರಣ ಸಂಸ್ಥೆಯು ನಮ್ಮ ತಿಪಟೂರು ತಾಲೂಕಿನ ಪ್ರಗತಿಪರ ಕೃಷಿಕರಾದ ಲಿಂಗದಹಳ್ಳಿ ಎಸ್ ಗಂಗಾಧರಯ್ಯನವರಿಗೆ ಮಿಲೀನಿರ್ ಫಾರ್ಮರ್ ಆಫ್ ಇಂಡಿಯಾ ೨೦೨೫ ಪ್ರಶಸ್ತಿ ಭಾಜಕರಾದದ್ದಾರೆ. ಹಾಗಾಗಿ ಇಡೀ ನಮ್ಮ ತಾಲೂಕು ಹೆಮ್ಮೆ ಪಡುವಂತ ವಿಷಯವಾಗಿದ್ದು. ಇಂತಹ ಒಂದು ಸಮಾಜಮುಖಿ ಕಾರ್ಯನಿರ್ಸುತ್ತಿರುವ ಇವರಿಗೆ ಹಾಗೂ ಕೃಷಿಕರಾಗಿ ಸೇವೆ ಸಲ್ಲಿಸಿರುವ ವ್ಯಕ್ತಿಗೆ ಇಂಥ ಪ್ರಶಸ್ತಿ ಲಭಿಸಿದ್ದು ತುಂಬಾ ಸಂತೋಷದ ವಿಚಾರ ಹಾಗೂ ಈ ಪ್ರಶಸ್ತಿಯನ್ನು ನೀಡಿದ ನವದೆಹಲಿ ಕೃಷಿ ಜಾಗರಣ ಸಂಸ್ಥೆಗೂ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಡಾ! ಭಾಸ್ಕರ್, ಹರ್ಷ, ತೇಜಮೂರ್ತಿ, ಉಮೇಶ್, ಶಂಕ್ರಪ್ಪ ಬಳ್ಳೆಕಟ್ಟೆ, ನಟರಾಜ್ ಆರ್ ವಿ, ವಸಂತ ಸಿ, ಪ್ರಕಾಶ್ ಬಸವರಾಜ್ ಲಿಂಗಣ್ಣ ರಮೇಶ್ ಬಸವಣ್ಣ ಪಂಚಾಕ್ಷರಯ್ಯ, ಸುನಂದ ಮಲ್ಲಿಕಾರ್ಜುನಯ್ಯ ಮತ್ತಿತರು ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.
