ತಿಪಟೂರು: ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಅವಣದಲ್ಲಿ ಪತ್ರಕರ್ತರು ಹಾಗೂ ಅಟಲ್ ಬಿಹಾರಿ ವಾಜಪೇಯಿ ಬಳಗದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ಜನ್ಮದಿನ ಸರಳತೆ ಯಿಂದ ಆಚರಿಸಲಾಯಿತು.
ಬಿಜೆಪಿ ಪಕ್ಷದ ಯುವ ಮೋರ್ಚಾ ಅಧ್ಯಕ್ಷರಾದ ಹರ್ಷರವರು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಕೀಯ ಮುತ್ಸದ್ದಿಯಾಗಿದ್ದ ವಾಜಪೇಯಿ ಅವರು ದೇಶಕಂಡ ಅಪರೂಪದ ರಾಜಕಾರಣಿ. ರಾಜಕೀಯ ವಲಯದಲ್ಲೂ ಆಜಾತ ಶತ್ರು ಎಂದೆ ಗುರುತಿಸಿಕೊಂಡಿದ್ದರು. ದೇಶದ ಅಭಿವೃದ್ಧಿ ಮತ್ತು ರಕ್ಷಣೆ ವಿಷಯದಲ್ಲಿ ಅವರು ನೀಡಿದ ಕೊಡುಗೆ ಅಮೋಘ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ವಾಜಪೇಯಿ ಅವರ ಆಡಳಿತ ಇತರೆ ರಾಜಕೀಯ ವ್ಯಕ್ತಿಗಳಿಗೆ ಆದರ್ಶರಾಗಿದ್ದಾರೆ. ಇವರು ದೂರಾಲೋಚನೆ ಹೊಂದಿದ್ದ ಪ್ರಧಾನಿಯಾಗಿದ್ದರು. ನೆಚ್ಚಿನ ಪ್ರಧಾನಿ ಹಾಗೂ ಅಜಾತ ಶತ್ರು ಎಂದೇ ಪ್ರಸಿದ್ಧರಾಗಿದ್ದರು ಎಂದು ಕೇರಾ ಸಂಘದ ಜಿಲ್ಲಾಧ್ಯಕ್ಷ ಡಾಕ್ಟರ್ ಭಾಸ್ಕರ್ ತಿಳಿಸಿದರು. ಗಂಗಾಧರಯ್ಯ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತರು, ನಟರಾಜು ಯವ ಮುಖಂಡರು, ಈಶ್ವರ್, ಶುಭ ವಿಶ್ವಕರ್ಮ, ರಾಜಣ್ಣ, ಶಂಕ್ರಪ್ಪ ಬೆಳ್ಳೆ ಕಟ್ಟೆ, ರೈತ ಕವಿ,ಹಿರಿಯ ಮುಖಂಡರು ಮತ್ತಿತರು ಹಾಜರಿದ್ದರು.
