ಕೈವಾರ: ದಿನಾಂಕ 17.1.2026 ಶನಿವಾರದಂದು ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ಕರ್ನಾಟಕ ದಿನಪತ್ರಿಕೆಗಳ ಸಂಘದ ಸಹಯೋಗದಲ್ಲಿ ಪತ್ರಕರ್ತರ ಕಾರ್ಯಾಗಾರ, ಸಂಚಿಕೆ ಬಿಡುಗಡೆ ಹಾಗೂ ಸಮಾರೋಪ ಸಮಾರಂಭಕಾರ್ಯಕ್ರಮವನ್ನು ಕೋಲಾರದ ಕೈವಾರ ಶ್ರೀ ಕ್ಷೇತ್ರದಲ್ಲಿ ಆಯೋಜಿಸಲು ಮುಂದಾಗಿದ್ದು ದಿನಾಂಕದ ನಿಗದಿಗಾಗಿ ಈ ದಿನ ಕೈವಾರ ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಎಂ ಆರ್ ಜಯರಾಮ್ ಅವರನ್ನು ಮುಕ್ತವಾಗಿ ಭೇಟಿಯಾಗಿದ್ದು, ಧರ್ಮದರ್ಶಿಗಳವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಾರ್ಚ್ 21 -22 ರಂದು ಕಾರ್ಯಗಾರ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಮಾರೋಪ ಸಮಾರಂಭ ನಡೆಸಲು ಅವಕಾಶ ಕಲ್ಪಿಸಿರುತ್ತಾರೆ. ಈ ದಿಸೆಯಲ್ಲಿ ಧರ್ಮದರ್ಶಿ ಯವರಿಗೆ ನಿಯೋಗ ಅಭಿನಂದನೆ ಸಲ್ಲಿಸಿರುತ್ತದೆ.
ಈ ಸಂದರ್ಭದಲ್ಲಿ ಕರ್ನಾಟಕ ದಿನಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಮತಿ ಡಾ. ಜಿ ವೈ ಪದ್ಮ ನಾಗರಾಜ್, ಪದಾಧಿಕಾರಿ ಶ್ರೀಮತಿ ಪ್ರೊಫೆಸರ್ ಸಮತ ದೇಶಮಾನೆ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಕಲಾವಿದ ವಿಷ್ಣು, ರಾಜ್ಯ ಅಧ್ಯಕ್ಷರಾದ ಜಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಈ .ಎಸ್ ವಿಶ್ವನಾಥ್, ಸಹಕಾರದರ್ಶಿ, ಶ್ರೀಮತಿ ಸುಮಾ ಆರ್ ಪುರುಷೋತ್ತಮ್, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಉಮೇಶ್, ಕೋಲಾರ ಜಿಲ್ಲಾಧ್ಯಕ್ಷ ರಾಜಗೋಪಾಲ್ ಹಾಗೂ ಕೋಲಾರ ಜಿಲ್ಲಾ ಪದಾಧಿಕಾರಿ ಡಾ.ಶ್ರೀನಿವಾಸ್ ಉಪಸ್ಥಿತರಿದ್ದರು. ದಿನಾಂಕ 21-22 ಮಾರ್ಚ್ 2026 ರಂದು ಪತ್ರಕರ್ತರ ಕಾರ್ಯಗಾರ, ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಮಾರೋಪ ಸಮಾರಂಭವನ್ನು ಪತ್ರಿಕೋದ್ಯಮದ ದಿಗ್ಗಜರೊಡನೆ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಹಾಗೂ ಕರ್ನಾಟಕ ದಿನಪತ್ರಿಕೆಗಳ ಸಂಘದ ಸಹಯೋಗದಲ್ಲಿ ಆಯೋಜಿಸುತ್ತಿದ್ದು, ಎಲ್ಲಾ ಜಿಲ್ಲೆ, ತಾಲೂಕುಗಳ ಅಧ್ಯಕ್ಷರುಗಳು ಹಾಗೂ ಸದಸ್ಯರು ಮತ್ತಿತರ ಪತ್ರಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕೋರಲಾಗಿದೆ.
