ತಿಪಟೂರು: ಕರ್ನಾಟಕ ವರದಿಗಾರರ ಹಾಗೂ ಸಂಪಾದಕ ಪತ್ರಕರ್ತರ ಸಂಘಕ್ಕೆ ತಾತ್ಕಾಲಿಕವಾಗಿ ಕಚೇರಿ ಹಾಗೂ ನಿವೇಷನ ನೀಡುವಂತೆ ನಗರದ ನಗರಸಭೆಯ ಶಾಸಕರ ಕಚೇರಿಯಲ್ಲಿ, ಶಾಸಕ ಕೆ.ಷಡಕ್ಷರಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ವರದಿಗಾರರ ಹಾಗೂ ಸಂಪಾದಕ ಪತ್ರಕರ್ತರ ಸಂಘದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಡಾ.ಭಾಸ್ಕರ್ ಮಾತನಾಡಿ, ತಾತ್ಕಾಲಿಕವಾಗಿ ಕಚೇರಿಗಾಗಿ ಯಾವುದಾದರೊಂದು ಸರ್ಕಾರಿ ಕಟ್ಟಡ ನೀಡಲು ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಪತ್ರಕರ್ತರ ಬಗ್ಗೆ ನಿಜವಾದ ಕಾಳಜಿಯುಳ್ಳ ವ್ಯಕ್ತಿತ್ವ ಹೊಂದಿರುವ ನೀವು, ಪತ್ರಕರ್ತರ ಸಮಸ್ಯೆ ಅರಿತು ನಮ್ಮ ಮನವಿಗೆ ಸ್ಪಂದಿಸಿ, ತಾತ್ಕಾಲಿಕವಾಗಿ ಕಚೇರಿ ನೀಡಿದರೆ, ದಿನನಿತ್ಯದ ವರದಿ ಹಾಗೂ ನಮ್ಮ ಸಂಘದ ಕಾರ್ಯಚಟುವಟಿಕೆಗಳಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದರು.
ಮನವಿ ಪತ್ರ ಸ್ವೀಕರಿಸಿದ ಶಾಸಕ ಕೆ.ಷಡಕ್ಷರಿಯವರು, ನಾವು ನಿಜವಾಗಿ ವಸ್ತು ನಿಷ್ಠವಾಗಿ ಕೆಲಸ ಮಾಡುತ್ತೇನೆ.
ಪತ್ರಕರ್ತರಲ್ಲಿಯೇ ಎರಡು ಮೂರು ಬಣಗಳಾದರೆ, ಯಾರಿಗೆ ಕಚೇರಿ ಕೊಡಲು ಸಾಧ್ಯ. ಪತ್ರಕರ್ತರಿಗೆ ತಾತ್ಕಾಲಿಕ ಕಚೇರಿ ನೀಡಬೇಕು ಎಂದು ಕೊಂಡಿದ್ದೇನೆ.
ತಾತ್ಕಾಲಿಕವಾಗಿ ಕಚೇರಿ ಪಡೆಯಬೇಕೆಂದರೆ ಎಲ್ಲಾ ಪತ್ರಕರ್ತರ ಬಣಗಳು ಒಂದಾಗಿ ಬನ್ನಿ ಆಗ ಮಾತ್ರ ಕಚೇರಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಕೆ. ಷಡಕ್ಷರಿರವರು ಹಿರಿಯ ಪತ್ರಕರ್ತ ಡಾ.ಭಾಸ್ಕರ್ ರವರನ್ನು ಸನ್ಮಾನಿಸಿ, ಗೌರವಿಸಿದರು.
ಶಾಸಕರಾದ ಕೆ.ಷಡಕ್ಷರಿರವರಿಗೆ ಮನವಿ ಪತ್ರ ಸಲ್ಲಿಸಿದ ನಂತರ, ಉಪ ವಿಭಾಗಾಧಿಕಾರಿ ಬಿ.ಕೆ.ಸಪ್ತ ಶ್ರೀ ರವರಿಗೆ ಕೂಡ ಮನವಿ ಪತ್ರ ಸಲ್ಲಿಸಿದ್ದು,ಉಪ ವಿಭಾಗಾಧಿಕಾರಿಗಳು ಮಾತನಾಡಿ, ಶಾಸಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ, ಭರವಸೆ ನೀಡಿದರು.
ಕರ್ನಾಟಕ ವರದಿಗಾರರ ಹಾಗೂ ಸಂಪಾದಕ ಪತ್ರಕರ್ತರ ಸಂಘದ ತಾ.ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ, ಉಪಾಧ್ಯಕ್ಷರಾದ ಶುಭ, ಸರ್ವೇಶಾಚಾರ್ ಮತ್ತು ಕಾರ್ಯದರ್ಶಿ ಡಿ.ಮಂಜುನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
