‘ದುಡ್ಡಿನ ಆಟ ಬಲ್ಲವರಾರು’ ಚಲನಚಿತ್ರದ ಚಿತ್ರೀಕರಣ ಮುಕ್ತಾಯ

ಭಾಸ್ಕರ ಪತ್ರಿಕೆ
0




The shooting of the film 'Duddina Aata Ballavararu' has been completed.

‘ದುಡ್ಡಿನ ಆಟ ಬಲ್ಲವರಾರು’ ಚಲನಚಿತ್ರದ ಚಿತ್ರೀಕರಣ ಮುಕ್ತಾಯ


ಮೈಸೂರು : ಮೈಸೂರ್ ಫಿಲಂ ಮೇಕರ್ಸ್ ರವರ ಚೊಚ್ಚಲ ಕನ್ನಡ ಚಲನಚಿತ್ರ ‘ದುಡ್ಡಿನ ಆಟ ಬಲ್ಲವರಾರು’ ಚಲನಚಿತ್ರದ ಚಿತ್ರೀಕರಣವು ಚಿಕ್ಕಪಾಳ್ಯ ಗ್ರಾಮದ ಬಂದಂತೆಮ್ಮ ದೇವಸ್ಥಾನದಲ್ಲಿ ಮದುವೆಯ ದೃಶ್ಯದ ಚಿತ್ರೀಕರಣದೊಂದಿಗೆ ಕುಂಬಳಕಾಯಿ ಒಡೆಯುವ ಮೂಲಕ ಸಂಪೂರ್ಣ ಮುಕ್ತಾಯವಾಯಿತು.
ಮಧ್ಯಮವರ್ಗದ ಕುಟುಂಬದಲ್ಲಿ ದುಡ್ಡು ಇಲ್ಲದಿರುವಾಗ ಮತ್ತು ದುಡ್ಡಿದ್ದಾಗ ಬದುಕಿನಲ್ಲಾಗುವ ಏರುಪೇರುಗಳು ನೋವು ನಲಿವುಗಳು , ಒಳಿತು ಕೆಡಕುಗಳನ್ನ ಸಮಾಜಕ್ಕೆ ತಿಳಿಸುವದೇ ಚಿತ್ರದ ಸಾರವಾಗಿದೆ. ಚಿತ್ರೀಕರಣವು ಗಂಜಾಂ ಚಿಕ್ಕಪಾಳ್ಯ ,ಮೇಲುಕೋಟೆ ,ಮಹಾದೇವಪುರ ,ದೊಡ್ಡಪಾಳ್ಯ ಕರಿಘಟ್ಟ , ಶ್ರೀರಂಗಪಟ್ಟಣ ಮೊದಲಾದ ಸ್ಥಳಗಳಲ್ಲಿ ನಡೆದಿದೆ. ಡಬ್ಬಿಂಗ್ ಕಾರ್ಯಗಳು ಈ ವಾರ ಆರಂಭಗೊಳ್ಳುತ್ತಿದೆ. ಅದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ ಎಂದು ನಿರ್ದೇಶಕ ಎಸ್ ಕೆ ಬಾಬು ತಿಳಿಸಿದರು. ತಾರಾ ಬಳಗದಲ್ಲಿ ಎಂಜಿಎನ್ ಪ್ರಸಾದ್, ಸೌಮ್ಯಮಲ್ಲಿಕ್, ಎಸ್ ಕೆ ಬಾಬು, ಸುಪ್ರಿಯಾ ರೆಡ್ಡಿ, ಆನಂದ್, ಮಂಜುಳಾ, ಸುಪ್ರಿಯ, ಜೆಟ್ ಆನಂದ್ , ಅಮೂಲ್ಯ ,ಮಾನ್ಯ ,ಮಹೇಂದ್ರ ,ಲೋಕೇಶ್ ,ವೆಂಕಟೇಶ್ ,ಶೋಭಾ ,ಮಂಡ್ಯ ಆನಂದ್, ಯಶೋದಮ್ಮ ,ಪ್ರಶಾಂತ್ ,ನಂಜೇಗೌಡ ,ಪುರುಷೋತ್ತಮ ಮೊದಲಾದವರಿದ್ದಾರೆ.
ಛಾಯಾಗ್ರಹಣ ಸದಾಶಿವ ಹಿರೇಮಠ, ಸಂಕಲನ ಮಹೇಂದ್ರ ಮಹಾದೇವ, ಸಂಗೀತ ಮನೋರಾವ್, ನೃತ್ಯ ನಿರ್ದೇಶಕರು ಪ್ರದೀಪ್ ಮತ್ತು ಮೈಸೂರು ಪ್ರೇಮ್, ವರ್ಣಾಲಂಕಾರ ರಾಜು, ಸಾಹಸ ಧರ್ಮ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹ ನಿರ್ದೇಶನ ಆನಂದ್ ,ಅಸೋಸಿಯೇಟ್ ಪಲ್ಲವಿ , ಕಾರ್ಯಕಾರಿ ನಿರ್ವಹಣೆ ಸುನಿಲ್ ಡಿಸೋಜಾ ಆಗಿದ್ದು, ಕಥೆ –ಚಿತ್ರಕಥೆ- ಸಾಹಿತ್ಯ-ಸಂಭಾಷಣೆ ಜೊತೆಗೆ ನಿರ್ದೇಶನ ಹೊಣೆ ಎಸ್ ಕೆ ಬಾಬು ಬೆಳಗುಳ ಅವರದ್ದಾಗಿದೆ. ಚಿತ್ರಕ್ಕೆ ಮೈಸೂರು ಫಿಲಂ ಮೇಕರ್ಸ ಗ್ರೂಪ್ ಬಂಡವಾಳ ಹೂಡಿದ್ದಾರೆ. ಆದಷ್ಟು ಬೇಗ ಚಿತ್ರ ತೆರೆಗೆ ತರುವ ಆಲೋಚನೆ ನಿರ್ಮಾಪಕರದ್ದಾಗಿದೆ.

The post ‘ದುಡ್ಡಿನ ಆಟ ಬಲ್ಲವರಾರು’ ಚಲನಚಿತ್ರದ ಚಿತ್ರೀಕರಣ ಮುಕ್ತಾಯ appeared first on Kalyanasiri.



from Kalyanasiri https://ift.tt/W7NxCPO<

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*