ತಿಪಟೂರು: ಕಲ್ಪತರು ನಾಡಿನ ನಾಡಹಬ್ಬ,ಐತಿಹಾಸಿಕ ಪ್ರಸಿದ್ದ ಶ್ರೀಸತ್ಯಗಣಪತಿ ವಿಸರ್ಜನ ಮಹೋತ್ಸವ ಅದ್ದೂರಿಯಾಗಿ ವೈಭವದಿಂದ ನಡೆಯಿತು,ಗಣೇಶ ಚತುರ್ಥಿಯಂದು,ಸಕಲ ಪೂಜಾಕೈಂಕರರ್ಯಗಳೊಂದಿಗೆ ಶಿಲ್ಪಗಳಿಂದ ತಯಾರಾಗಿ ಪ್ರತಿಷ್ಠಾಪನೆಗೊಂಡಿದ ಶ್ರೀಸತ್ಯಗಣಪತಿ 90 ದಿನಗಳ ಕಾಲ ಪೂಜಿಸಲ್ಪಟ್ಟು,95ನೇ ವರ್ಷದ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ವೈಭವಯುತವಾಗಿ ನಡೆಯಿತು, ಶ್ರೀಸತ್ಯಗಣಪತಿಯನ್ನ ತಿಪಟೂರು ಅಮಾನೀಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಶ್ರೀಸತ್ಯಗಣಪತಿ ಜಾತ್ರೆ, ಮೈಸೂರು ದಸರ, ಬೆಂಗಳೂರು ಕರಗ,ಸೇರಿದಂತೆ ರಾಜ್ಯದ ಹಲವಾರು ವಿಶೇಷ ಜಾತ್ರಾ ಮಹೋತ್ಸವಗಳಂತೆ.ಹೆಸರುವಾಸಿಯಾಗಿರುವ ತಿಪಟೂರು ಶ್ರೀಸತ್ಯಗಣಪತಿ ಜಾತ್ರೆ,ಕಲ್ಪತರು ನಾಡಹಬ್ಬವಾಗಿದೆ,ದೇಶ ಹಾಗೂರಾಜ್ಯ ದ ವಿವಿಧ ಭಾಗಗಳಿಂದ ಜಾತ್ರೆಗೆ ಭಕ್ತಸಮೂಹವೇ ಸೇರಿದಜಾತ್ರೆ, 2ದಿನಗಳ ಕಾಲ ವೈಭವದಿಂದ ನಡೆಯಿತು, ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶೇಷಪೂಜೆಯೊಂದಿಗೆ ಆರಂಭವಾದ ಉತ್ಸವ,ದೊಡ್ಡಪೇಟೆ.ಕನ್ನಿಕಾಪರಮೇಶ್ವರಿ ದೇವಾಲಯ ರಸ್ತೆ, ಕಾರೋನೇಷನ್ ರಸ್ತೆ, ಎಲೆ ಆಸರ,ರೈಲ್ವೆ ಸ್ಟೇಷನ್ ರೋಡ್. ಗಾಂಧೀ ನಗರ,ಬಿ.ಹೆಚ್ ರಸ್ತೆ ಕೆ.ಆರ್ ಬಡಾವಣೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ,ಮೆರವಣಿಗೆ ನಡೆಸಲಾಯಿತು. ಉತ್ಸವ ಸಾಗುವ ಮಾರ್ಗಗಳಲ್ಲಿ,ವಿವಿಧ ಸಂಘಸಂಸ್ಥೆಗಳು.ವರ್ತಕರು.ಭಕ್ತರು ವಿವಿಧ ಬಗೆಯ ತರಹೇವಾರಿ ,ಹೂವಿನ ಹಾರಗಳು ಸ್ವಾಮಿಯವರಿಗೆ ಅರ್ಪಿಸಿದರು ಕಡುಬು,ಕಜ್ಜಾಯ, ಸೇರಿದಂತೆ ವಿವಿಧ ಬಗೆಯ ಖಾದ್ಯಗಳ ಹಾರದ ಜೊತೆಗೆ, ಭಕ್ಷ್ಯ. ಭೋಜನಗಳಲ್ಲಿ ಅರ್ಪಿಸಿ ಪೂಜೆಸಲ್ಲಿಸಿದರು.ಉತ್ಸವ ಸಾಗಿದ ಮಾರ್ಗಗಳಲ್ಲಿ ಉಚಿತ ಪ್ರಸಾದ ಫಾನಕ,ಫಲಹಾರ ಮಜ್ಜಿಗೆ ನೀರು,ವಿತರಿಸಿ ಭಕ್ತಿ ಸಮರ್ಪಿಸಿದರು.

