Install Right to Information Act nameplates in all offices: Sidrameshwar
ಎಲ್ಲಾ ಕಛೇರಿಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮದ ನಾಮಫಲಕ ಅಳವಡಿಸಿ: ಸಿದ್ರಾಮೇಶ್ವರ
ಕೊಪ್ಪಳ ಮೇ 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮ-2005ರ ನಾಮಫಲಕವನ್ನು ಅಳವಡಿಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ವಿವಿಧ ಕಛೇರಿಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮ-2005ರ ನಾಮಫಲಕವನ್ನು ಅಳವಡಿಸಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ದೂರುಗಳು ಸ್ವೀಕೃತವಾಗಿದ್ದು, ಜಿಲ್ಲಾಡಳಿತ ಭವನದಲ್ಲಿರುವ ಎಲ್ಲಾ ಕಛೇರಿಗಳು ಹಾಗೂ ತಮ್ಮ ಅಧೀನದಲ್ಲಿ ಬರುವ ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಮಾಹಿತಿಯುಳ್ಳ ನಾಮಫಲಕವನ್ನು ಅಳವಡಿಸುವಂತೆ ಪ್ರಕಟಣೆ ತಿಳಿಸಿದೆ.
The post ಎಲ್ಲಾ ಕಛೇರಿಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮದ ನಾಮಫಲಕ ಅಳವಡಿಸಿ: ಸಿದ್ರಾಮೇಶ್ವರ appeared first on Kalyanasiri.
from Kalyanasiri https://ift.tt/Ykc9xHI<
