Demand for the construction of the Daroji-Gangavathi railway line.
Demand for the construction of the Daroji-Gangavathi railway line.
ದರೋಜಿ-ಗಂಗಾವತಿ ರೇಲ್ವೆ ಲೈನ್ ನಿರ್ಮಾಣಕ್ಕೆ ಆಗ್ರಹ.
ದರೋಜಿ-ಗಂಗಾವತಿ ರೈಲ್ವೆ ನೂತನ ಬ್ರಾಡಗೇಜ್ ಲೈನ್ ನಿರ್ಮಾಣದಿಂದ ಹೊಸಪೇಟೆ, ಜಿಂದಾಲ್, ಬಳ್ಳಾರಿಯಿಂದ ಹೈದ್ರಾಬಾದ್ ಗೆ ಪ್ರಯಾಣ ಮತ್ತು ಸರಕು ಸಾಗಾಣಿಕೆಗೆ ಅನುಕೂಲವಾಗಲಿದೆ.
ದರೋಜಿ-ಗಂಗಾವತಿ ನಡುವೆ ಇರುವ 35 ಕಿ.ಮಿ.ಅಂತರದ ನೂತನ ಬ್ರಾಡಗೇಜ್ ಲೈನ್ ನಿರ್ಮಾಣದಿಂದ ಹುಬ್ಬಳ್ಳಿ,ಗದಗ,ಕೊಪ್ಪಳ, ಗಿಣಿಗೇರಾ ಗಂಗಾವತಿ, ಸಿಂಧನೂರು, ಮಾನ್ವಿ ತಾಲೂಕಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಭಾವಿಸಲಾಗಿತ್ತು.ಆದರೆ ಹೊಸಪೇಟೆ, ಬಳ್ಳಾರಿ ನಗರದ ಪ್ರಯಾಣಿಕರಿಗೆ ಮಾತ್ರವಲ್ಲದೆ,ಈ ಭಾಗದ ಸರಕು ಸಾಗಾಣಿಕೆಗೂ ಅನುಕೂಲವಾಗಲಿದೆ.
ಈ ಎಲ್ಲವನ್ನು ಪರಿಗಣಿಸಿ,ರೇಲ್ವೆ ಮಂಡಳಿ ಕಾರ್ಯ ಸಾಧ್ಯತಾ ವರದಿ ಅವಲೋಕಿಸಿ 2024 ರ ಆಗಷ್ಟ 9 ರಂದು ಯೋಜನಾ ವೆಚ್ಚವನ್ನು 705.45 ಕೋಟಿ ರೂಪಾಯಿಗೆ ನಿಗದಿ ಪಡಿಸಲಿದೆ.ಈ ನೂತನ ಬ್ರಾಡ್ ಗೇಜ್ ರೈಲು ಮಾರ್ಗ ಹೈದ್ರಾಬಾದ್ ಸಂಪರ್ಕದ ದೂರದ ಪ್ರಯಾಣವನ್ನು ಬಹಳಷ್ಟು ಕಡಿಮೆ ಮಾಡಲಿದೆ. ಆದ್ದರಿಂದ ಕೇಂದ್ರ ಸರಕಾರ ಸಚಿವ ಸಂಪುಟದಲ್ಲಿ ಇದನ್ನು ಅಂಗೀಕರಿಸಿ,ಅತೀ ಶೀಘ್ರವಾಗಿ ಈ ಯೋಜನೆಯ ನಿರ್ಮಾಣಕ್ಕೆ ಕಾರ್ಯಾರ್ಯಂಭ ಮಾಡಬೇಕೆಂದು ನೈರುತ್ಯ ವಲಯದ ರೇಲ್ವೆ ಬಳಕೆದಾರರ ಸಮಿತಿಯ ಮಾಜಿ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಕೇಂದ್ರ ರೇಲ್ವೆ ಸಚಿವ ಅಶ್ವಿನ್ ವೈಷ್ಣವ,ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ರೇಲ್ವೆ ಬೋರ್ಡ್ ಅಧ್ಯಕ್ಷರಿಗೆ ಇಮೇಲ್ ಸಂದೇಶದ ಮೂಲಕ ವಿನಂತಿಸಿದ್ದಾರೆ.
The post ದರೋಜಿ-ಗಂಗಾವತಿ ರೇಲ್ವೆ ಲೈನ್ ನಿರ್ಮಾಣಕ್ಕೆ ಆಗ್ರಹ. appeared first on Kalyanasiri.
from Kalyanasiri https://ift.tt/5Ip6LbM<

