ಅರಕಲಗೂಡು: ತಾಲ್ಲೂಕಿನ ಕೊಣನೂರು ಹೋಬಳಿಯ ಕಟ್ಟೆಪುರ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ಜಾನುವಾರುಗಳನ್ನು ತಿಂದುಹಾಕಿರುವ ಘಟನೆ ನಡೆದಿದ್ದು, ಇದರಿಂದ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ.
ಕಟ್ಟೆಪುರ ಗ್ರಾಮದ ಕುಂಟೆ ಕಾಳೇಗೌಡರು ಹಾಗೂ ನಾಗಣ್ಣ ಅವರಿಗೆ ಸೇರಿದ ಮೇಕೆಗಳನ್ನು ಚಿರತೆ ತಿಂದುಹಾಕಿದೆ. ಜನವಸತಿ ಪ್ರದೇಶದ ಬಳಿಯೇ ಚಿರತೆ ಸಂಚರಿಸುತ್ತಿರುವುದು ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಈ ಕುರಿತು ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಸೆರೆಹಿಡಿಯಲು ಪಂಜರವನ್ನು ಇರಿಸಿದ್ದಾರೆ.
ಚಿರತೆಯನ್ನು ಸಂಪೂರ್ಣವಾಗಿ ಬಂಧಿಸುವವರೆಗೆ ಸಾರ್ವಜನಿಕರು ಹಾಗೂ ರೈತರು ಯಾರೂ ಕೂಡ ಚಮನಗುಂಡಿ ದಾಟಿ ಅರಣ್ಯದ ಕಡೆಗೆ ತೆರಳದಂತೆ ಇಲಾಖೆಯವರು ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ.
ವರದಿ: ಮಂಜು ಶ್ರವಣೂರು, ಹೊಳನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
The post ಅರಕಲಗೂಡು: ಚಿರತೆ ದಾಳಿಗೆ ನಡುಗಿದ ಗ್ರಾಮಸ್ಥರು; ಜಾನುವಾರು ಸಾವು, ಅರಣ್ಯ ಇಲಾಖೆಯಿಂದ ಪಂಜರ ಸ್ಥಾಪನೆ appeared first on nammatumakuru.
from nammatumakuru https://ift.tt/rGdTOpy
