ಮನೆ- ಮನೆಗೆ ದೇವಲ ಸ್ಫೂರ್ತಿ ಮಾಸಿಕ ಕಾರ್ಯಕ್ರಮ ಉದ್ಘಾಟನೆ

ಭಾಸ್ಕರ ಪತ್ರಿಕೆ
0

Inauguration of the 'Devala Spoorthi' door-to-door monthly program

ಮನೆ- ಮನೆಗೆ ದೇವಲ ಸ್ಫೂರ್ತಿ ಮಾಸಿಕ ಕಾರ್ಯಕ್ರಮ ಉದ್ಘಾಟನೆ

ಗಂಗಾವತಿ :ತಾಲೂಕು ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಡಿಯಲ್ಲಿ ನಡೆದ ಮನೆಮನೆಗೆ ದೇವಲಸ್ಪೂರ್ತಿ ಕಾರ್ಯಕ್ರಮವನ್ನು ನಾಗರಾಜ್ ಹುಚ್ಚನಗೌಡರರವರ ಮನೆಯಲ್ಲಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಕೊಪ್ಪಳ ಜಿಲ್ಲಾ ದೇವಾಂಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶಿವಶಂಕರಪ್ಪ ಚೆನ್ನಿರವರು ಗಂಗಾವತಿಯ ಶ್ರೀ ಮುದ್ದು ಸಂಘ ಸ್ವಾಮಿ ಗವಿಮಠ ದೇವಾಂಗ ಜನಾಂಗದ ಪವಿತ್ರ ಕ್ಷೇತ್ರವಾಗಬೇಕೆಂದು ಸರಕಾರದ ಸಹಾಯದೊಂದಿಗೆ ಅಭಿವೃದ್ಧಿ ಪಡಿಸಬೇಕೆಂದು ಕರೆ ನೀಡಿದರು. ಹಾಗೂ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗಂಗಾವತಿ ದೇವಾಂಗ ಸಮಾಜದ ಅಧ್ಯಕ್ಷರಾದ ವಾಸುದೇವ ಕೊಳಗದವರು ಸಮಾಜದ ಅಭಿವೃದ್ಧಿ ಎಂದರೆ ಪ್ರತಿಯೊಬ್ಬರ ಅಭಿವೃದ್ಧಿ ಆದ್ದರಿಂದ ಪ್ರತಿಯೊಬ್ಬರೂ ಕೈಗೂಡಿಸಿ ವಿನೂತನ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಸಂಘದ ಅಧ್ಯಕ್ಷರಾದ ಶಿವಾನಂದ ತಿಮ್ಮಾಪೂರ ಪ್ರತಿ ತಿಂಗಳು ಮೂರನೆಯ ಶುಕ್ರವಾರದಂದು ದೇವಾಂಗ ಸಮಾಜ ಬಾಂಧವರ ಮನೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜದ ಅಭಿವೃದ್ಧಿಗಾಗಿ ಹಾಗೂ ದೇವಾಂಗ ಸಮಾಜದ ಹಿರಿಮೆಯ-ಗರಿಮೆಯನ್ನು ತಿಳಿಸಿಕೊಡುವ ಉಪನ್ಯಾಸ ಏರ್ಪಡಿಸಲಾಗುವುದು ಎಂದು ತಿಳಿಸಿದರು. , ಶಿಕ್ಷಕರಾದ ಶಿವಪ್ರಸಾದ ಬೆನ್ನೂರವರು ಉಪನ್ಯಾಸ ನೀಡಿ ದೇವಾಂಗ ಸಮಾಜದ ಇತಿಹಾಸ ದೇವಾಂಗ ಸಮಾಜ ನಡೆದುಬಂದು ದಾರಿ ಹಾಗೂ ವಿಜಯನಗರ ಕಾಲದಲ್ಲಿ ಸಮೃದ್ಧಿಯಲ್ಲಿದ್ದ ದೇವಾಂಗ ಸಮಾಜದ ಇತಿಹಾಸವನ್ನು ತಿಳಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಪರಗಿ ನಾಗರಾಜ, ನೀಲಕಂಠಪ್ಪ ನಾಗಶೆಟ್ಟಿ ಶ್ರೀಮತಿ ಕವಿತಾ ಅಸುಂಡಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ನೂರಾರು ದೇವಾಂಗ ಸಮಾಜದ ಬಂಧುಗಳು ಹಾಜರಿದ್ದರು

The post ಮನೆ- ಮನೆಗೆ ದೇವಲ ಸ್ಫೂರ್ತಿ ಮಾಸಿಕ ಕಾರ್ಯಕ್ರಮ ಉದ್ಘಾಟನೆ appeared first on Kalyanasiri.



from Kalyanasiri https://ift.tt/KEsgU8j<

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*