KaRaVe and farmers decide to lay siege to the HESCOM office in Chikkodi, demanding uninterrupted power supply.

ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರ
ಚಿಕ್ಕೋಡಿ ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಉಂಟಾಗುತ್ತಿರುವ ಅಸಮರ್ಪಕ ವಿದ್ಯುತ್ ಸರಬರಾಜು ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆಗಳ ಕಾಲ ತ್ರಿ-ಫೇಸ್ (Three-Phase) ವಿದ್ಯುತ್ ಒದಗಿಸುವಂತೆ ಆಗ್ರಹಿಸಿ ಹೆಸ್ಕಾಂ (HESCOM) ಕಚೇರಿಗೆ ಮುತ್ತಿಗೆ ಹಾಕಲು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರೈತ ಸಮುದಾಯ ನಿರ್ಧರಿಸಲಾಗಿದೆ.
ತಾಲ್ಲೂಕಿನಾದ್ಯಂತ ಪದೇ ಪದೇ ವಿದ್ಯುತ್ ಕೈಕೊಡುತ್ತಿರುವುದರಿಂದ ರೈತರು ಬೆಳೆದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ಬೆಳೆಗಳು ಒಣಗುವ ಸ್ಥಿತಿ ತಲುಪಿವೆ.
ಸಮರ್ಪಕವಾಗಿ ವಿದ್ಯುತ್ ನೀಡದೆ ಹೆಸ್ಕಾಂ ಅಧಿಕಾರಿಗಳು ರೈತರ ಹಾಗೂ ಸಣ್ಣ-ಪುಟ್ಟ ಉದ್ದಿಮೆದಾರಾರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 7 ತಾಸುಗಳ ಕಾಲ ತ್ರಿ-ಫೇಸ್ ವಿದ್ಯುತ್ ನೀಡಬೇಕಾಗಿದ್ದರೂ, ಪ್ರಸ್ತುತ ಕೇವಲ 1-2 ಗಂಟೆಗಳೂ ಸಮರ್ಪಕವಾಗಿ ಸರಿಯಾದ ಸಮಯದಲ್ಲಿ ವಿದ್ಯುತ್ ಸಿಗುತ್ತಿಲ್ಲ.
ಇದರಿಂದಾಗಿ ರೈತರಿಗೆ ತೀವ್ರವಾದ ತೊಂದರೆಯಾಗುತ್ತಿದೆ ಅದ್ದುದರಿಂದ ಮತ್ತಿಗೆ ಅನಿವಾರ್ಯವಾಗಿದೆ.ಹೇಸಾಂ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ತಾಲ್ಲೂಕಿನ ರೈತ ಸಮುದಾಯ ಸೇರಿ ದಿನಾಂಕ 21/09/2026ರ ಸೋಮವಾರ ಮುಂಜಾನೆ 10.30ಕ್ಕೆ ಚಿಕ್ಕೋಡಿಯ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ಮಾಡುವುದಾಗಿ ನಿಯೋಜಿಸಿಲ್ಲಾಗಿದೆ, ಕಾರಣ ತಾಲೂಕಾ ಎಲ್ಲ ಕರವೇ ಕಾರ್ಯಕರ್ತರು ಹಾಗೂ ಎಲ್ಲ ರೈತ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಶ್ರೀ ಸಂಜು ಬಡಿಗೇರವರು ಕರೆ ಕೊಟ್ಟಿದ್ದಾರೆ.
The post ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರ appeared first on Kalyanasiri.
from Kalyanasiri https://ift.tt/ZAVRJzp<
