ಗಂಗೊಳ್ಳಿ: ರಾಜ್ಯದ ಪ್ರಥಮ ‘ವರ್ಕರ್ಸ್ ಇಂಡಿಯಾ ಫೆಡರೇಶನ್’ ಚರ್ಚ್ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ

ಭಾಸ್ಕರ ಪತ್ರಿಕೆ
0

ಗಂಗೊಳ್ಳಿ: ಕೊಸೆಸಾಂವ್ ಮಾತೆಯ ಚರ್ಚ್‌ನ ಕಾರ್ಮಿಕ ಆಯೋಗ ಹಾಗೂ ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಆಶ್ರಯದಲ್ಲಿ ದಿನಾಂಕ 27/09/2026 ರಂದು ಗಂಗೊಳ್ಳಿಯ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ವಿವಿಧ ಕಾರ್ಮಿಕರ ಸಹಮಿಲನ ಹಾಗೂ ವರ್ಕರ್ಸ್ ಇಂಡಿಯಾ ಫೆಡರೇಶನ್ ಕುರಿತ ಮಾಹಿತಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಇದು ರಾಜ್ಯದಲ್ಲಿಯೇ ಘಟಿತವಾದ ಪ್ರಪ್ರಥಮ ಚರ್ಚ್ ಮಟ್ಟದ ವರ್ಕರ್ಸ್ ಇಂಡಿಯಾ ಫೆಡರೇಶನ್‌ ನ ಘಟಕ ಎಂಬುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ.

ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜ ರವರು ಅಧ್ಯಕ್ಷತೆ ವಹಿಸಿ, ಕಾರ್ಮಿಕ ವರ್ಗದವರು ಸಂಘಟಿತರಾಗಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವರ್ಕರ್ಸ್ ಇಂಡಿಯಾ ಫೆಡರೇಶನ್‌ನ ಕರ್ನಾಟಕ ರಾಜ್ಯಾಧ್ಯಕ್ಷರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರಾದ ಎಲ್ರೋಯ್ ಕಿರನ್ ಕ್ರಾಸ್ಟೊ ರವರು ಸಂಘಟನೆಯ ಮಹತ್ವ, ಕಾರ್ಯವೈಖರಿ ಹಾಗೂ ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಸರಕಾರಿ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಇದೇ ವೇಳೆ ವರ್ಕರ್ಸ್ ಇಂಡಿಯಾ ಫೆಡರೇಶನ್ ಗಂಗೊಳ್ಳಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ವಿಲ್ಸನ್ ರೆಬೆರೊ ಅಧ್ಯಕ್ಷರಾಗಿ, ವಿಲ್ಸನ್ ಡಾಯಸ್ ಉಪಾಧ್ಯಕ್ಷರಾಗಿ, ಗ್ಲೋರಿಯಾ ಡಿಸೋಜ ಕಾರ್ಯದರ್ಶಿಯಾಗಿ, ಪೀಟರ್ ರೆಬೆರೊ ಸಹಕಾರ್ಯದರ್ಶಿಯಾಗಿ, ಕ್ಲಾರಾ ಲೋಬೊ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಎಡ್ವರ್ಡ್ ಫೆರ್ನಾಂಡಿಸ್ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಜೊತೆಗೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾಜಿಲ್ ಪಾಯಸ್, ಇಗ್ನೇಶಿಯನ್ ಫೆರ್ನಾಂಡಿಸ್, ರೋಜಿ ಫೆರ್ನಾಂಡಿಸ್, ಅರುಣ್ ಡಿಸೋಜ, ಕೆವಿನ್ ರೆಬೆಲ್ಲೊ ಹಾಗೂ ವಿಲ್ಮಾ ಡಿಸೋಜ ಅವರು ಆಯ್ಕೆಯಾದರು.

ಕಾರ್ಯಕ್ರಮದ ಆರಂಭದಲ್ಲಿ ಗಂಗೊಳ್ಳಿ ಚರ್ಚಿನ ಕಾರ್ಮಿಕ ಆಯೋಗದ ಸಂಚಾಲಕರಾದ ಕ್ಲಾರಾ ಲೋಬೊ ಸ್ವಾಗತಿಸಿದರು. ಚರ್ಚಿನ ಆಯೋಗದ ಸಂಯೋಜಕರಾದ ಜೆಸಿಂತಾ ಡಿಸೋಜ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು. ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಓವಿನ್ ರೆಬೆಲ್ಲೊ ಕಾರ್ಯಕ್ರಮ ನಿರ್ವಹಿಸಿದರೆ, ಘಟಕದ ಕಾರ್ಯದರ್ಶಿ ಜಾನೆಟ್ ಡಾಯಸ್ ವಂದನಾರ್ಪಣೆಗೈದರು.

The post ಗಂಗೊಳ್ಳಿ: ರಾಜ್ಯದ ಪ್ರಥಮ ‘ವರ್ಕರ್ಸ್ ಇಂಡಿಯಾ ಫೆಡರೇಶನ್’ ಚರ್ಚ್ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ appeared first on Mahanayaka.



from Mahanayaka https://ift.tt/Av4tBIO

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*