ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಎನ್‌ಸಿಪಿ ಪಕ್ಷಕ್ಕೆ ಸೇರ್ಪಡೆಯಾದ ಬಾಬಾ ಸಿದ್ದೀಕಿ ಪುತ್ರ

ಭಾಸ್ಕರ ಪತ್ರಿಕೆ
0


ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಮಹಾರಾಷ್ಟ್ರದ ಮಾಜಿ ಸಚಿವ ಇತ್ತೀಚಿಗೆ ಹತ್ಯೆಗೀಡಾದ‌ಬಾಬಾ ಸಿದ್ದೀಕಿ ಅವರ ಪುತ್ರ ಜೀಶಾನ್ ಸಿದ್ದೀಕಿ ಶುಕ್ರವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೇರಿದ್ದಾರೆ. ಮುಂಬರುವ ಚುನಾವಣೆಗೆ ಬಾಂದ್ರಾ ಪೂರ್ವ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಜೀಶಾನ್ ಸಿದ್ದೀಕಿ ಅವರನ್ನು ಎನ್ ಸಿಪಿ ಘೋಷಿಸಿದೆ.

ಎನ್ ಸಿಪಿಗೆ ಸೇರಿದ ನಂತರ ಮಾತನಾಡಿದ ಜೀಶಾನ್, “ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಭಾವನಾತ್ಮಕ ದಿನ. ಈ ಕಠಿಣ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುನಿಲ್ ತತ್ಕರೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಬಾಂದ್ರಾ ಪೂರ್ವದಿಂದ ನಾಮನಿರ್ದೇಶನವನ್ನು ಪಡೆದಿದ್ದೇನೆ. ಎಲ್ಲಾ ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ ನಾನು ಖಂಡಿತವಾಗಿಯೂ ಬಾಂದ್ರಾ ಈಸ್ಟ್ ಅನ್ನು ಮತ್ತೆ ಗೆಲ್ಲುತ್ತೇನೆ ಎಂದು ನನಗೆ ಖಾತ್ರಿಯಿದೆ” ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*