ತಿಪಟೂರು: ಸರಳ ಜೀವನ, ಸದಾ ಎಕಾನಮಿ ಕ್ಲಾಸ್ನಲ್ಲೇ ಪ್ರಯಾಣ, ಸಾವಿರಾರು ಕೋಟಿ ದಾನ! ರತನ್ ಟಾಟಾ ಕುರಿತು 10 ಆಸಕ್ತಿದಾಯಕ ಸಂಗತಿಗಳಿವು ರತನ್ ಟಾಟಾ ಅವರು ತಮ್ಮ ಆದಾಯದ ಶೇಕಡ 60-65ರಷ್ಟನ್ನು ಚಾರಿಟಿಗೆ ದಾನ ಮಾಡಿದ್ದಾರೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ರತನ್ ಟಾಟಾ ಅವರನ್ನು ಕೇವಲ ದಾನಧರ್ಮಕ್ಕಾಗಿ ಮಾತ್ರವಲ್ಲ, ಅವ ವಿನಮ್ರತೆಗೆ ಮತ್ತು ಗೌರವಾನ್ವಿತ ಸ್ವಭಾವಕ್ಕಾಗಿ ಭಾರತೀಯರು ಪ್ರೀತಿಸುತ್ತಾರೆ. ಕೈಗಾರಿಕೋದ್ಯಮಿ ಯಾವುದೇ ವಿವಾದಕ್ಕೆ ಗುರಿಯಾದವರಲ್ಲ. ಇಂದು ನಾವು ರತನ್ ಟಾಟಾ ಅವರಂತಹ ಪ್ರಸಿದ್ಧ, ಯಶಸ್ವಿ, ಶ್ರೀಮಂತ ಮತ್ತು ವಿನಮ್ರ ವ್ಯಕ್ತಿಯನ್ನು ಮತ್ತೆಂದೂ ನೋಡಲು ಸಾಧ್ಯವೇ ಇಲ್ಲ.
ರತನ್ ಟಾಟಾ ಹೆಸರಾಂತ ಕೈಗಾರಿಕೋದ್ಯಮಿ ಹಾಗೂ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಇವರು ಒಂದು ರೀತಿ ಅಜಾತ ಶತ್ರು ಎಂದು ಹೇಳಬಹುದು ಏಕೆಂದರೆ, ಉದ್ಯಮಿ ಎಂದರೆ, ಪೈಪೋಟಿ, ದ್ವೇಷ ಎಲ್ಲವೂ ಇದ್ದೇ ಇರುತ್ತವೆ. ಆದರೆ ರತನ್ ಟಾಟಾ ಅವರಿಗೆ ಮಾತ್ರ ಜಗತ್ತಿನಲ್ಲಿ ಒಬ್ಬನೇ ಒಬ್ಬ ವಿರೋಧಿಯೂ ಇರಲಿಲ್ಲ. ಪ್ರಪಂಚದಾದ್ಯಂತದ ಅನೇಕ ಜನರು ಅವರನ್ನು ಮೆಚ್ಚಲು ಕಾರಣ ಅವರ ಮಾನವೀಯ ಕೆಲಸಗಳು. ಪ್ರತಿಯೊಂದು ಸಂಘಟಿತ ಸಂಸ್ಥೆಯು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರೂ, ರತನ್ ಟಾಟಾ ಅವರ ಸಮಾಜ ಸೇವೆಗೆ ಸರಿಸಾಟಿ ಯಾವುದೂ ಇರಲಿಲ್ಲ.
ತನ್ನ ಲಾಭಾಂಶದ 7೦ % ಸಮಾಜ ಕಲ್ಯಾಣಕೆ ಮೀಸಲಿರಿಸಿದ ಮಹಾಧಾನಿ. ಮಹಾನ್ ಮಾನವತಾವಾದಿ. ತತ್ವಜ್ಙಾನಿ ಜಗತ್ತಿನ ಶ್ರೀಮಂತ ಉಧ್ಯಮಿ ರತನ್ ಟಾಟಾ. ಭಾರತಕ್ಕೆ ಸಂಕಷ್ಟವಾದರೆ ನನ್ನ ಆಸ್ತಿಗಳೆಲ್ಲ ಮಾರಿ ಭಾತರಕ್ಕೆ ಧಾರೆಯೆರೆಯುತ್ತೆನೆಂದು ಹೇಳಿದ್ದರು ಇಂತಹ ಮಹಾನಾತ್ಮಕ್ಕೆ ತಿಪಟೂರು ನಗರದ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ್ ಸರ್ಕಲ್) ಬಳಿ ಇರುವ ಭಾಸ್ಕರ ಪತ್ರಿಕೆಯ ಕಚೇರಿಯಲ್ಲಿ ಪ್ರಧಾನ ಸಂಪಾದಕರಾದ ಡಾ.ಭಾಸ್ಕರ್ ಮತ್ತು ಚೆನ್ನವೀರೇಗೌಡ ಭಕ್ತಿಪೂರ್ವಕ ಶ್ರಧ್ದಾಂಜಲಿ ಸಲ್ಲಿಸಿದರು.

