![]() |
| ವಾಹನಗಳು ದಟ್ಟಣೆಯಲ್ಲಿ ಸಿಲುಕಿಕೊಂಡಿರುವ ದೃಶ್ಯ |
ತಿಪಟೂರು: ಹಾಸನ್ ಸರ್ಕಲ್ ನಲ್ಲಿರುವ ರೈಲ್ವೆ ಗೇಟ್ ನಲ್ಲಿ ಸಂಚರಿಸುವಂತಹ ಪ್ರಯಾಣಿಕರಿಗೆ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಮುಕ್ತಿ ಎಂದು ಜನ ನಿಬೀಡ ಪ್ರದೇಶವಾದ ಹಾಸನ್ ವೃತ್ತದಲ್ಲಿರುವ ರೈಲ್ವೆ ಗೇಟ್ನಲ್ಲಿ ಅತಿ ಹೆಚ್ಚು ಪ್ರಯಾಣಿಕರು ವಾಹನಗಳು ಸಂಚರಿಸುವುದರಿಂದ ಈ ಗೇಟನ್ನು ಪ್ರತಿ 10 ನಿಮಿಷಕ್ಕೊಮ್ಮೆ ಹಾಕುವುದರಿಂದ ಪ್ರಯಾಣಿಕರ ಗೋಳು ಹೇಳತೀರದು ಬೆಳಗ್ಗೆ ಕಚೇರಿ ಮತ್ತು ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು, ಪೋಷಕರು, ವಾಹನ ಸವಾರರು, ಕೂಲಿ ಕಾರ್ಮಿಕರು ಸರಿಯಾದ ಸಮಯಕ್ಕೆ ಸಂಚರಿಸುವುದು ತುಂಬಾ ಕಷ್ಟ ಸಾಧ್ಯವಾಗಿದೆ. ಈ ವಿಚಾರದಲ್ಲಿ ರೈಲ್ವೆ ಇಲಾಖೆ ಮತ್ತು ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ನಮ್ಮ ತುಮಕೂರು ಲೋಕಸಭಾ ಸದಸ್ಯರಾದ ವಿ ಸೋಮಣ್ಣನವರು ಕರ್ನಾಟಕ ರಾಜ್ಯ ರೈಲ್ವೆ ಖಾತೆಯನ್ನು ಹೊಂದಿದ್ದು ಕೂಡಲೇ ಇದರ ಕಡೆ ಗಮನ ಹರಿಸಿ ರೈಲ್ವೆ ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಆರಂಭಿಸುವುದು ಸೂಕ್ತ, ಇದೇ ಮಾರ್ಗವಾಗಿ ಹಾಸನ ಮತ್ತು ತಿಪಟೂರು ತಾಲೂಕಿನ ಗ್ರಾಮಗಳಿಗೆ ಸಂಚರಿಸುವ ಪ್ರಯಾಣಿಕರು ವಾಹನ ಸಾವರರು,ಮಹಿಳೆಯರು ಮತ್ತು ಶಾಲಾ ಮಕ್ಕಳು ಇಡಿ ಶಾಪ ಹಾಕುತ್ತಿದ್ದಾರೆ ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡುವುದು ಸೂಕ್ತ ಈಗಾಗಲೇ ಪರ್ಯಾಯವಾಗಿ ಮಾರನ ಗೆರೆ ಹತ್ತಿರ ಅಂಡರ್ ಪಾಸ್ ನಿರ್ಮಾಣವಾಗಿದೆ ಆದರೆ ಅದು ಬಾರಿವಾಹನಗಳಿಗೆ ಪ್ರವೇಶವಿಲ್ಲ ಹಾಗೆ ಹಾಸನ್ ವೃತ್ತದಲ್ಲಿ ಶಾಲಾ ಕಾಲೇಜುಗಳು ಅತಿ ಹೆಚ್ಚು ಕಚೇರಿಗಳು ಇರುವುದರಿಂದ ಓಡಾಡಲು ಈ ಮಾರ್ಗವೇ ಸೂಕ್ತವೆನಿಸುತ್ತದೆ, ಮತ್ತು ಹತ್ತಿರ ಕೂಡ ಆಗುತ್ತದೆ ಹಾಗಾಗಿ ಸರ್ಕಾರ ಈ ಕೂಡಲೇ ಗಮನಹರಿಸಬೇಕು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.

