ಹುಬ್ಬಳ್ಳಿಯ ಪಾತ್ರೆ ಅಂಗಡಿ ವ್ಯಾಪಾರಿಗೆ ಹನಿಟ್ರ್ಯಾಪ್! ಬೆತ್ತಲೆ ವಿಡಿಯೋ ಮಾಡಿ ಬ್ಲಾಕ್‌ಮೇಲ್: ಇಬ್ಬರು ಮಹಿಳೆಯರು ಸೇರಿ ಐದು ಜನರ ಬಂಧನ!

ಭಾಸ್ಕರ ಪತ್ರಿಕೆ
0

ಹನಿ ಟ್ರ್ಯಾಪ್ ತಂಡ 
ದೂರುದಾರ: ಚಗನ್ ಲಾಲ್

ಹುಬ್ಬಳ್ಳಿನಗರದ ಪಾತ್ರೆ ಅಂಗಡಿ  ವ್ಯಾಪಾರಿಯೊಬ್ಬರ ಬೆತ್ತಲೆ ವಿಡಿಯೋ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಮಹಿಳೆ ಸೇರಿ ಐವರನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ರೋಪಿಗಳಾದ ಜೋಯಾ ನದಾಫ, ಪರ್ವಿನ ಬಳ್ಳಾರಿ, ಸಯ್ಯದ್ ತಹಶಿಲ್ದಾರ, ತೌಸಿಫ್, ಅಬ್ದುಲ್ ಎಂದು ತಿಳಿದು ಬಂದಿದೆ. ಬಂಧಿತ ಮಹಿಳೆ ಜೋಯಾ ವ್ಯಾಪಾರಿ ಚಗನ್‌ಲಾಲ್‌ ಅವರ ಮೊಬೈಲ್‌ಗೆ ಕರೆಮಾಡಿ ಪರಿಚಯ ಮಾಡಿಕೊಂಡು,ಹುಬ್ಬಳ್ಳಿಯ ಉಣಕಲ್‌ ಕ್ರಾಸ್‌ಗೆ ಆತನನ್ನ ಕರೆಸಿಕೊಂಡಿದ್ದಾಳೆ. ಆ ನಂತರ ರಾಜನಗರದ ಮನೆಗೆ ಕರೆದುಕೊಂಡು ಹೋಗಿ ಆತನನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾಳೆ. ಆಮೇಲೆ ಆಕೆಯ ತಂಡದೊಂದಿಗೆ ಸೇರಿ ಐವರು"ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದರೆ ಆ  ವಿಡಿಯೋ ವೈರಲ್‌ ಮಾಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ" ಈ ಬಗ್ಗೆ ಬೇಸತ್ತ ಚಗನ್‌ಲಾಲ್‌‌ ಸೋಮವಾರ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಹನಿಟ್ರ್ಯಾಪ್‌ ತಂಡದವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 9000/-ರೂ ನಗದು ಎರಡು ಬೈಕ್, ಐದು ಮೊಬೈಲ್ ಫೋನ್ಸ್, ವಶಪಡಿಸಿಕೊಳ್ಳಲಾಗಿದೆ.

ಗೋವಾ ಬಳ್ಳಾರಿಯಲ್ಲೂ ಹನಿಟ್ರ್ಯಾಪ್ ಮಾಡಿದ್ದ ತಂಡಇದೇ ತಂಡವು ಇದೇ ರೀತಿಯಲ್ಲಿ ಬಳ್ಳಾರಿ ಮತ್ತು ಗೋವಾದಲ್ಲೂ ಕೂಡ ಹನಿಟ್ರ್ಯಾಪ್ ಮಾಡಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದು ಹೆಚ್ಚಿನ ತನಿಖೆ ನಂತರ ಸಂಪೂರ್ಣ ಸತ್ಯ ಹೊರಬರಬೇಕಿದೆ!

ಅಂಗಡಿಹೊರಗಿನ ಬೋರ್ಡ್‌ ನಂಬರ್‌ ತಗೊಂಡು ಆಟ:ಈ ಗ್ಯಾಂಗ್‌ನ ಪುರುಷರು ಅಂಗಡಿಯ ಹೊರಗೆ ಹಾಕಿರುವ ನಂಬರ್‌ಗಳನ್ನು ತಗೊಂಡು  ಮಹಿಳೆಯರಿಗೆ ಕೊಡುತ್ತಿದ್ದರು. ಅವರು ವ್ಯಾಪಾರಿಗಳ ಮೊಬೈಲ್ ಫೋನ್ ಸಂಖ್ಯೆಗೆ,ವಾಟ್ಸಪ್‌ ಸಂದೇಶ  ಕಳಿಸೋದು , ಕಾಲ್  ಮಾಡಿ ಸಲುಗೆ ಬೆಳೆಸಿಕೊಂಡು ಬಲೆಗೆ ಹಾಕಿಕೊಳ್ಳುತ್ತಿದ್ದರು. ನಂತರ ಅವರೊಂದಿಗೆ ಇರುವ ಅಶ್ಲೀಲ ವಿಡಿಯೋಗಳನ್ನು ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*