ರಂಗಾಪುರ ಕ್ಷೇತ್ರದ ಮಾಜಿ ಜಿ.ಪಂ. ಸದಸ್ಯರಾದ ತ್ರಿಯಂಬಕ ರವರು ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಸಚಿವ ಬಿ.ಸಿ.ನಾಗೇಶ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು
ತಿಪಟೂರು: ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಕರ್ನಾಟಕ ಹಾಲು ಒಕ್ಕೂಟದ ಮಾಜಿ ನಿರ್ದೇಶಕರು, ರಂಗಾಪುರ ಕ್ಷೇತ್ರದ ಮಾಜಿ ಜಿ.ಪಂ. ಸದಸ್ಯರಾದ ತ್ರಿಯಂಬಕ ರವರು ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಸಚಿವ ಬಿ.ಸಿ.ನಾಗೇಶ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ನಂತರ ಮಾಜಿ ಜಿ.ಪಂ. ಸದಸ್ಯರಾದ ತ್ರಿಯಂಬಕ ರವರಿಗೆ ತಾಲೂಕು ಬಿ.ಜೆ.ಪಿ ಮುಖಂಡರು ಮತ್ತು ಪತ್ರಕರ್ತರಾದ ಡಾ. ಭಾಸ್ಕರ್ ಅಭಿನಂದನೆ ಸಲ್ಲಿಸಿದರು. ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಬಳ್ಳೆ ಕಟ್ಟೆ ಸುರೇಶ್, ಜಿಲ್ಲಾ ಬಿಜೆಪಿ ಮುಖಂಡರಾದ ಬಿಸ್ಲಿಹಳ್ಳಿ ಜಗದೀಶ್, ಗಂಗರಾಜು, ಕೆರಗೋಡಿ ದೇವರಾಜು, ಹಳೆಪಾಳ್ಯ ಸದಣ್ಣ ಮತ್ತಿತರರು ಇದ್ದರು.
