ಬೆಂಗಳೂರು: ಜಿ.ಬಿ.ಜಕ್ಕನಗೌಡರ್ ಮೂಲತಃ ಗದಗಿನವರು, ಹಲವು ದಿನಗಳಿಂದ ತೀರ್ಥಹಳ್ಳಿಯಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಕೋರ್ಟ್ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ಉಪ್ಪಾರಪೇಟೆ ಪೊಲೀಸ್ ಠಾಣೆಯ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವೈಭವ್ ಲಾಡ್ಜ್‌ನ ಕೊಠಡಿಯಲ್ಲಿ ಬುಧವಾರ ರಾತ್ರಿ ಮೃತದೇಹ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ, ಕೋರ್ಟ್ ಕೇಸ್‌ಗೆಂದು ಬೆಂಗಳೂರಿಗೆ ಬಂದಿದ್ದ ಚಿಕ್ಕನಗೌಡರ್ ವೈಭವ್ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ಸಂಜೆಯಿಂದಲೂ ಯಾರ ಸಂಪರ್ಕಕ್ಕೂ ಅವರು ಸಿಕ್ಕಿರಲಿಲ್ಲ, ನಂತರ ಅವರ ಮೊಬೈಲ್ ಲೊಕೇಶನ್ ಪರಾಂಭರಿಸಿದಾಗ ಾದು ಮೆಜೆಸ್ಟಿಕ್ ಸಮೀಪ ತೋರಿಸುತ್ತಿತ್ತು. ಅದನ್ನು ಆಧರಿಸಿ ಪರಿಶೀಲನೆ ಮಾಡಿದಾಗ ವೈಭವ್ ಲಾಡ್ಜ್ ಕೊಠಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಕೊಠಡಿ ಬಾಗಿಲು ಹಾಕಿದ್ದು ಪೊಲೀಸರು ಬಾಗಿಲು ತೆರೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕವೇ ಈ ಸಾವಿಗೆ ನಿಜ ಕಾರಣ ಏನೆಂದು ಗೊತ್ತಾಗಲಿದೆ, ತೀರ್ಥಹಳ್ಳಿ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೃತ್ ಅತ್ರೇಶ್ ಅವರನ್ನು 2023ರಲ್ಲಿ ವರ್ಗಾವಣೆ ಮಾಡಲಾಗಿತ್ತು. ಬಳಿಕ ಹಂಗಾಮಿಯಾಗಿ ಲಿಂಗರಾಜು ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ಸರ್ಕಾರ 2023ರ ಅಕ್ಟೋಬರ್‌ನಲ್ಲಿ ಜಿ. ಬಿ. ಜಕ್ಕನಗೌಡರ್ ಅವರನ್ನು ನೂತನ ತಹಶೀಲ್ದಾರ್ ಆಗಿ ಸರಕಾರ ನೇಮಕ ಮಾಡಿತ್ತು.

