ತಿಪಟೂರು: ತಾಯಿ ಭೂಮಿ ಮೇಲಿನ ನಿಜವಾದ ದೇವರಿದಂತೆ, ತಮಗೆ ಸಾವಿರ ಕಷ್ಟಗಳಿದರೂ,ಮಕ್ಕಳ ಅಭ್ಯದಯಕ್ಕಾಗಿ ದುಡಿಯುವ ತಂದೆ,ತಾಯಿಯನ್ನ ಗೌರವಿಸ ಬೇಕು ಎಂದು ಪತಂಜಲಿ ಯೋಗಪ್ರತಿಷ್ಠಾನದ ಅಧ್ಯಕ್ಷ ಚನ್ನಬಸವಣ್ಣ ತಿಳಿಸಿದರು.
ತಾಲ್ಲೋಕಿನ ರಂಗಾಪುರ ರಾಯರತೋಟದ ಶ್ರೀ ಆಂಜನೇಯ ಕ್ಷೇತ್ರದಲ್ಲಿ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ.ಸಂಸ್ಕಾರ ಭಾರತಿ ತಿಪಟೂರು, ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ಸಹ ಯೋಗದಲ್ಲಿ ಆಯೋಜಿಸಿದ್ದ,ಯೋಗತರಬೇತಿ ಶಿಭಿರದ ಅಂಗವಾಗಿ ಮಾತೃಭೋಜನ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿ ಯೋಗ ಮನುಷ್ಯನ ಆರೋಗ್ಯ ವೃದ್ದಿಗೆ ಸಹಕಾರಿಯಾಗಿದೆ,ಸಧೃಡ ದೇಹದಲ್ಲಿ ಸಧೃಡ ಮನಸ್ಸುಹೊಂದಲು ಸಾಧ್ಯ,ಯೋಗದಿಂದ ಉತ್ತಮ ಆರೋಗ್ಯ ಸಂಪಾದಿಸಬಹುದು,ಸಂಸ್ಕಾರ,ಸಂಘಟನೆ,ಸದ್ಗುಣ ಬೆಳೆಸುವುದು, ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಸಂಪಾದಿಸ ಬೇಕು ಎನ್ನುವುದು ಯೋಗ ಪ್ರತಿಷ್ಠಾನದ ಉದೇಶವಾಗಿದೆ, ಪತಂಜಲಿ ಯೋಗ ಪ್ರತಿಷ್ಠಾನ ರಾಜ್ಯಸೇರಿದಂತೆ ದೇಶವಿದೇಶಗಳಲ್ಲಿ,ಯೋಗತರಬೇರಿ ನೀಡುತ್ತಿದೆ,ಯೋಗ ಶಿಕ್ಷಣದ ಜೊತೆಗೆ ದೇಶಸೇವೆ, ಸಮಾಜ ಸೇವಕಾರ್ಯವನ್ನೂ ಸಹ ಮಾಡುತ್ತಿದೆ,ಮನುಷ್ಯನಾಗಿ ಹುಟ್ಟಿದ ಮೇಲೆ ತಮ್ಮ ಕೈಲಾದ ಸಮಾಜಸೇವೆ ಮಾಡಬೇಕು, ತಾವೂಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ತನಗೆ ಉಳಿದಿದ್ದು ಸಮಾಜಕ್ಕೆ ಎನ್ನುವ ಮಾನೋಭಾವನೆ ಬೆಳಸಿಕೊಂಡರೆ ನೆಮ್ಮದಿ ಜೀವನ ಸಾಧ್ಯ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಜಿಲ್ಲಾಸಂಚಾಲಕರಾದ ಚನ್ನಾಂಭಿಕ ರವರು ಮಾತನಾಡಿ ಭೂಮಿಸ ಮೇಲಿನ ನಿಜದೇವರು ತಾಯಿ,ತನಗೆ ಎಷ್ಟೆಕಷ್ಟಗಳಿದರೂ ,ಮಕ್ಕಳಿಗೋಸ್ಕರ ದುಡಿಯುವ ತಾಯಿಪ್ರೀತಿಗೆ ಪ್ರಪಂಚದಲ್ಲಿ ಯಾವುದೂ ಸಮನಲ್ಲ, ನಮ್ಮದೇಶದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಜಾಸ್ತಿಯಾಗುತ್ತಿರುವುದು ವಿಷಾದನೀಯ, ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಕುಟುಂಬದ ಮಹತ್ವತಿಳಿಸಿದ್ದಾಗ ಉತ್ತಮದಾರಿಯಲ್ಲಿ ಬೆಳೆದು, ತಂದೆ ತಾಯಿಗಳ ಸಂಧ್ಯಾಕಾಲದಲ್ಲಿ ನೆರವಾಗುವ ಗುಣಬೆಳಸಿಕೊಳ್ಳುತ್ತಾರೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ರಾಯರತೋಟದ ಆಂಜನೇಯಸ್ವಾಮಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದರು,ಮುಖ್ಯಾತಿಥಿಗಳಾಗಿಎಸ್.ಪಿ.ಎಸ್.ಎಸ್ ಸಂಚಾಲಕರಾದ ಸಿದ್ದಮಲ್ಲಣ್ಣ,ಶೋಭಕ್ಕ.ಗಿರೀಶ್ .ನಗರಸಂಚಾಲಕ ಬಸವರಾಜು.ಮಂಜುನಾಥ್ ಮುಂತ್ತಾದವರು ಉಪಸ್ಥಿತರಿದರು.
ವರದಿ: ಧರಣೇಶ್ ಕುಪ್ಪಾಳು
