ಮೈಸೂರು: ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ವಾಚಮನ್ ಶೆಡ್‌ನಲ್ಲಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,ಮೃತರನ್ನು BEML ಮ್ಯಾನೇಜರ್ ಮೋಹನ್ (54) ಎಂದು ಗುರುತಿಸಲಾಗಿದ್ದು, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಮ್ಯಾನೇಜರ್ ಆಗಿದ್ದರು.
ಬೋಗಾದಿ ಬಳಿಯ ಅಪಾರ್ಟ್ಮೆಂಟ್‌ನಲ್ಲಿದ್ದ ಮೋಹನ್ ದಿನಂಪ್ರತಿ ಕಾಯಕದಂತೆ ಭಾನುವಾರ ಬೆಳಿಗ್ಗೆ ಡ್ಯೂಟಿಗೆ ತೆರಳಿದ್ದರು, ನಂತರ ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ಭವನದ ವಾಚ್‌ಮ್ಯಾನ್ ಶೆಡ್‌ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ತನಿಖೆಯಿಂದ ಸಂಪೂರ್ಣ ಮಾಹಿತಿ ಹೊರಬರಬೇಕಾಗಿದೆ.
