ತಿಪಟೂರು: ನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್ (ಹಾಸನ ಸರ್ಕಲ್) ಬಳಿ ಇರುವ ಭಾಸ್ಕರ ಪತ್ರಿಕೆ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಡಾ. ಭಾಸ್ಕರ್ ಮಾತನಾಡಿ _ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗವು ನಾಲ್ಕನೇ ಅವಿಭಾಜ್ಯ ಅಂಗವಾಗಿದ್ದು ಇದು ಈ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವದರಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಸುಭದ್ರವಾಗಿದೆ" ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಡಾ. ಭಾಸ್ಕರ್, ಪತ್ರಕರ್ತರಾದ ಎಸ್. ಗಣೇಶ್, ರೈತ ಕವಿ ಡಾ. ಪಿ ಶಂಕರಪ್ಪ ಬಳ್ಳೇಕಟ್ಟೆ, ತುಮಕೂರು ಜಿಲ್ಲಾ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸರ್ವೇಶಾಚಾರ್, ಧರಣೇಶ್ ಕುಪ್ಪಾಳು ಹಾಗೂ ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.

