ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ರಥಯಾತ್ರೆ ಆಗಮನ

ಭಾಸ್ಕರ ಪತ್ರಿಕೆ
0




ತಿಪಟೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ, ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಇಂದು ತಿಪಟೂರು ತಾಲೂಕಿಗೆ ಆಗಮಿಸಿತು. ನಗರದ ಡಾ.ಶಿವಕುಮಾರಸ್ವಾಮಿ ಸರ್ಕಲ್ ನಿಂದ ನಗರದ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ ದೇವಾಲಯದವರೆಗೆ ರಥಯಾತ್ರೆಯು ಸಂಚರಿಸಿತು. ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಪವನ್ ಕುಮಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಸವರಾಜಪ್ಪ, ಗೌರವಾಧ್ಯಕ್ಷ ಶಿವಕುಮಾರ್, ಭಾಸ್ಕರ ಪತ್ರಿಕೆ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್, ರೈತ ಕವಿ ಶಂಕರಪ್ಪ ಬಳ್ಳೇಕಟ್ಟೆ, ಭಾಸ್ಕರ ಟಿವಿ ಯೂಟ್ಯೂಬ್‌ ವಾಹಿನಿಯ ಸುದ್ದಿವಾಚಕರಾದ ಶ್ರೀಮತಿ ಶುಭ ವಿಶ್ವಕರ್ಮ, ಶಿಕ್ಷಕಿ ಶಾರದಮ್ಮ, ಪುನೀತ್ ಮತ್ತಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*