Rs.500 ಗಾಗಿ ಐದು ಬಾರಿ ಚಾಕು ಇರಿತ

ಭಾಸ್ಕರ ಪತ್ರಿಕೆ
0



ಹುಬ್ಬಳ್ಳಿ: ಹೌದು "ಐದು ನೂರು ರೂಪಾಯಿ"ಗಾಗಿ ಯುವಕನೋರ್ವನಿಗೆ 5ಬಾರಿ ಚಾಕು ಇರಿಯಲಾಗಿದೆ ಈ ಘಟನೆ ಹಳೆ ಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಇನ್ಸಪೆಕ್ಟರ್‌ ಸುರೇಶ್‌ ಯಳ್ಳೂರ್‌ ಕಿಮ್ಸ್‌ ದಾಖಲಾದ ಯುವಕನನ್ನು ಭೇಟಿ ಆಗಿ ಹೇಳಿಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಈ ಚಾಕು ಇರಿತದ ಘಟನೆ ಶನಿವಾರ ರಾತ್ರಿ ಹಳೇಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದ್ದು, ಗಾಯಾಳು ಯುವಕ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ,
ಚಾಕು ಇರಿತಕ್ಕೆ ಒಳಗಾದ ಯುವಕನನ್ನು ಮೊಹ್ಮದ್ ಮೊರಬ ಎಂದು ಗುರುತಿಸಲಾಗಿದ್ದು, ಈತನ ಸ್ನೇಹಿತರೆ ಚಾಕು ಇರಿದಿದ್ದಾರೆ. ಶನಿವಾರ ರಾತ್ರಿ ಗೆಳೆಯರೆಲ್ಲರೂ ಒಟ್ಟಿಗೆ ಸೇರಿದಾಗ 500 ರೂಪಾಯಿ ಸಲುವಾಗಿ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿ  ಹಾಗೆ ಮೊಹ್ಮದ್‌ಗೆ ಅಲ್ತಾಫ್, ಜಾಫರ್, ರಫೀಕ್, ರಿಜ್ಜು ಸೇರಿ ಚಾಕುವಿನಿಂದ ಇರಿದಿದ್ದಾರೆ.
ಸಧ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ,ತನಿಖೆಯಿಂದ ಎಲ್ಲಾ ಸತ್ಯ ಹೊರಬರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*