ಬೆಂಗಳೂರು: ಪ್ರಿಯಕರನೊಬ್ಬ ಖಾಸಗಿ ವೀಡಿಯೋ ಇಟ್ಟುಕೊಂಡು 20 ವರ್ಷದ ಯುವತಿಗೆ ಬ್ಲಾಕ್‌ಮೇಲ್ ಮಾಡಿ 2.5ಕೋಟಿ ವಂಚಿಸಿದ್ದಾನೆ, ಈಗ ಪ್ರಿಯಕರ ಪೊಲೀಸರ ಅಥಿತಿಯಾಗಿದ್ದು ಅವನಿಂದ 80ಲಕ್ಷ ವಶಪಡೆಯಲಾಗಿದೆ.
ಖಾಸಗಿ ವೀಡಿಯೋ ಮಾಡಿದ ಪ್ರಿಯಕರ ಮೋಹನ್ ಕುಮಾರ್ ಮತ್ತು ಯುವತಿ ಒಟ್ಟಿಗೆ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದರು, ಅವರಿಬ್ಬರೂ ಉತ್ತಮ ಸ್ನೇಹಿತರಾಗಿದ್ದರು, ನಂತರ ಬೋರ್ಡಿಂಗ್ ಶಾಲೆಯ ಬಳಿಕ ಸಂಪರ್ಕವಿರಲಿಲ್ಲ. ಕೆಲವು ವರ್ಷಗಳ ನಂತರ ಅವರು ಮತ್ತೆ ಭೇಟಿಯಾಗಿದ್ದು, ಪರಸ್ಪರ ಪ್ರೀತಿಯಾಗಿದೆ ಯುವತಿ ಮದುವೆಯಾಗುವುದಾಗಿ ಮೋಹನ್ ಭರವಸೆ ನೀಡಿದ್ದರಿಂದ ಇಬ್ಬರೂ ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದು ಆ ಪ್ರವಾಸದಲ್ಲಿ, ಆತ್ಮೀಯರಾಗುವ ವೀಡಿಯೊಗಳನ್ನು ಮಾಡಿದ್ದ, ಅದನ್ನು ಕೇವಲ ನಮಗಾಗಿ ಮಾಡುತ್ತಿದ್ದೇನೆಂದು ಕುಮಾರ್ ಆಕೆಗೆ ಭರವಸೆ ನೀಡಿದ್ದ, ಕೆಲವು ವೀಡಿಯೊಗಳಲ್ಲಿ ಕುಮಾರ್ ತನ್ನ ಮುಖ ಗೋಚರಿಸದಂತೆ ಎಚ್ಚರಿಕೆ ವಹಿಸಿದ್ದ.
ಬಳಿಕ ಈ ವಿಡಿಯೋಗಳನ್ನು ಬಳಸಿ ಪ್ರಿಯತಮೆಯನ್ನೇ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ, ದೊಡ್ಡ ಮೊತ್ತದ ಹಣ ಕೊಡದಿದ್ದರೆ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ, ಇದರಿಂದ ಬೆಚ್ಚಿಬಿದ್ದ ಯುವತಿ ತನ್ನ ಅಜ್ಜಿಯ ಖಾತೆಯಿಂದ ರಹಸ್ಯವಾಗಿ 1.25 ಕೋಟಿ ರೂ ಡ್ರಾ ಮಾಡಿ ಮೋಹನ್ ಕುಮಾರ್ ನೀಡಿದ ಕೆಲವು ಅಕೌಂಟ್‌ಗೆ ವರ್ಗಾವಣೆ ಮಾಡಿದ್ದು, ಈ ಬ್ಲ್ಯಾಕ್‌ಮೇಲ್ ಮುಂದುವರಿದಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಒಟ್ಟು 1.32 ಕೋಟಿ ರೂ ಯುವತಿ ನೀಡಿದ್ದಾಳೆ, ಆದರೂ ಕುಮಾರ್‌ನ ಬೇಡಿಕೆ ನಿಲ್ಲಲಿಲ್ಲ. ಹುಡುಗಿ ಬಳಿಯಿದ್ದಂತಹ ದುಬಾರಿ ವಾಚ್‌ಗಳು, ಆಭರಣಗಳು ಮತ್ತು ಐಷಾರಾಮಿ ಕಾರನ್ನು ನೀಡುವಂತೆ ಮಾಡಿದ್ದಾನೆ, ಈತ ಹಲವು ಬಾರಿ ತನ್ನ ತಂದೆಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ, ಎಂದು ಯುವತಿಯ ದೂರಿನಲ್ಲಿದೆ.
ಮೋಹನ್ ಕುಮಾರ್ ಬೇಡಿಕೆಗಳನ್ನು ಮುಂದುವರಿಸಿದಾಗ, ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದರು. ಆರೋಪಿ ಮೋಹನ್ ಕುಮಾರ್ ನನ್ನು ಬಂಧಿಸಲಾಗಿದೆ, ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾತನಾಡಿ, "ಇದೊಂದು ಪೂರ್ವಯೋಜಿತ ಅಪರಾಧವಾಗಿದ್ದು, ಆರೋಪಿ 2.57 ಕೋಟಿ ಸುಲಿಗೆ ಮಾಡಿದ್ದು, 80 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದಿದ್ದಾರೆ

