ತಿಪಟೂರು: ರಾತ್ರಿವೇಳೆ ರೈತರ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ತೋಟದ ಮನೆ ರೈತರ ಹಿತರಕ್ಷಣಾ ಸಮಿತಿ ವತಿಯಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.


ರೈತಮುಖಂಡ ಜಯ ಶರ್ಮ ಮಾತನಾಡಿ ಬೆಸ್ಕಾಂ ಇಲಾಖೆ ರಾತ್ರಿವೇಳೆ ಕರಂಟ್ ತೆಗೆಯುವ ಮೂಲಕ ತೊಂದರೆ ನೀಡುತ್ತಿದೆ ನೂರಾರು ವರ್ಷಗಳಿಂದ ನಮ್ಮ ಹಿರಿಯರು ಬೆಳೆಸಿರುವ, ತೆಂಗಿನ ಮರಗಳು ವಿದ್ಯುತ್ ಸಮಸ್ಯೆಯಿಂದ ನೀರಿನ ಸಮಸ್ಯೆಯಾಗಿ ತೋಟಗಳು ಸೊರಗುತ್ತಿವೆ, ವೋಲ್ಟ್ ಜ್ ಸಮಸ್ಯೆಯ ಕಾರಣಕ್ಕೆ ಲಕ್ಷಾಂತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಇಲ್ಲದೆ ರೈತರು ಪರದಾಡುತ್ತಿದ್ದಾರೆ,ರಾತ್ರಿವೇಳ ತೋಟದ ಮನೆಗಳಿಗೆ ಕರಂಟ್ ಇಲ್ಲದೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ,ಸರ್ಕಾರ ತೋಟದ ಮನೆಗಳಿಗೆ ವಿದ್ಯುತ್ ಸಮಸ್ಯೆಮಾಡದಂತೆ ನಿರ್ದೇಶನವಿದ್ದರು,ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ, ಕೂಡಲೇ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು, ಸರ್ಕಾರದ ನಿರ್ದೇಶನದಂತೆ ವಿದ್ಯುತ್ ನೀಡಲು ಅಧಿಕಾರಿಗಳು ಒಪ್ಪಿಗೆ ನೀಡಿದ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಯಿತು.

