ಧಾರವಾಡ: ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ, ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಕನ್ನಡ ಮತ್ತು ಆಚರಣೆ ಸಮಿತಿ, ಶ್ರೀ ಮೌನೇಶ್ವರ ಧರ್ಮನಾಧಿ ಸಂಸ್ಥೆ ಟ್ರಸ್ಟ್ ಹಾಗೂ ಶ್ರೀ ಗಾಯತ್ರಿಮಾತಾ ಅಭಿವೃದ್ಧಿ ಮಂಡಳಿ ಆಶ್ರಯದೊಂದಿಗೆ ರಾಜ್ಯ ಮಟ್ಟದ ಪ್ರಥಮ ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶ ಮತ್ತು ವಿಶ್ವಕರ್ಮ ಮಹಿಳಾ ಸಾಧಕರ ಸನ್ಮಾನ ಸಮಾರಂಭವನ್ನು ಭಾನುವಾರ ಫೆ.23 ರಂದು ಬೆಳಿಗ್ಗೆ 9 ಗಂಟೆಗೆ ಧಾರವಾಡ ಪಾಟೀಲ ಪುಟ್ಟಪ್ಪ ಸಭಾ ಭವನ, ವಿದ್ಯಾವರ್ಧಕ ಸಂಘದ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ, ಎಂದು ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಭಾಸ್ಕರ ಬಡಿಗೇರ ವಕೀಲರುಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು.
ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕುಂಬಿ ಮಠದ ಅಭಿನವ ನಾಗಲಿಂಗ ಸ್ವಾಮೀಜಿ, ತಿಂಥಣಿ ಕ್ಷೇತ್ರದಮೌನೇಶ್ವರ ಸ್ವಾಮೀಜಿ, ಯಾದಗಿರಿ ಮುಕ್ತಮಠದ ಗಂಗಾಧರ ಸ್ವಾಮೀಜಿ ಸಾನಿಧ್ಯ ವಹಿಸುವರು, ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಡಾ. ಪವಿತ್ರಾ ಪ್ರಭಾಕರ ಆಚಾರ್ಯ (ರೆಡ್ಡಿ) ಅಧ್ಯಕ್ಷತೆ ವಹಿಸುವರು, ಮುಖ್ಯತಿಥಿಗಳಾಗಿ ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್, ಲಕ್ಷ್ಮೀ ಹೆಬ್ಬಾಳಕರ, ಸಂಸದ ಪ್ರಿಯಾಂಕಾ ಜಾರಕಿಹೊಳಿ, ಹು.ಧಾ.ಮ.ಪಾ ಮೇಯರ್ ರಾಮಣ್ಣ ಬಡಿಗೇರ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ, ಶಿರಸಂಗಿ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ, ಸಿ.ಬಿ. ಬಡಿಗೇರ, ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಜಗೋಪಾಲ ಕಟ್ಟಿಕೊಪ್ಪ ಬೆಳಗಾವಿ ಉಮೇಶ ಪತ್ತಾರ, ಮುರಳಿ ಬಡಿಗೇರ, ಮಲ್ಲಿಕಾರ್ಜುನ ಮತ್ತಾರ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು ಇತರರು ಭಾಗವಹಿಸುವರು ಎಂದು ಹೇಳಿದರು.
ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಕನ್ನಡ ಸೋಮ ಮಾತನಾಡಿ, ಈ ಸಮಾವೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಛಾಯಾ ಎ. ಬಡಿಗೇರ, ಶ್ರೀಮತಿ ವೀಣಾ ಎ. ಲಕ್ಕುಂಡಿ, ಡಾ. ಶ್ವೇತಾ ಲ. ಬಡಿಗೇರ, ಶಶಿಕಲಾ ಲ ಬಡಿಗೇರ, ಶುಭಾ ವಿಶ್ವಕರ್ಮ, ಶಾರದಾ ಬಡಿಗೇರ, ರೂಪಾ ಪರಮೇಶ್ವರ, ಶಾಂತಲಾ ಆಚಾರ್ಯ, ಡಾ. ಅಂಬಿಕಾ ಆಚಾರ, ಸಂಗೀತ ಶಿಕ್ಷಕಿ ಸುಮಿತ್ರಾ ಅ. ಪತ್ತಾರ ಸೇರಿದಂತೆ ವಿವಿಧ ಕ್ಷೇತ್ರದ ಮಹಿಳಾ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ವಿಶ್ವಕರ್ಮ ಸಮಾಜವನ್ನು ಪ್ರವರ್ಗ-1ಕ್ಕೆ ಸೇರಿಸಬೇಕು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಶ್ವಕರ್ಮರಿಗೆ ಆದ್ಯತೆ ನೀಡಬೇಕು. ವಿಶ್ವಕರ್ಮ ನಿಗಮಕ್ಕೆ ರೂ. 300 ಕೋಟಿ ಅನುದಾನ ನೀಡಿ. ವಿಧಾನಸೌಧ ಮುಖ್ಯದ್ವಾರದಲ್ಲಿ ವಿಶ್ವಕರ್ಮರ, ಜಕಣಾಚಾರ್ಯರ ಪ್ರತಿಮೆ ಸ್ಥಾಪನೆ ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು, ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ ಬಡಿಗೇರ, ಮೋಹನ ಆರ್ಕಸಾಲಿ ಇತರರು ಇದ್ದರು.
