
ತಿಪಟೂರು: ಹಾಲಿನ ಬಾಕಿ ಪಾವತಿ ಮಾಡಬೇಕು ಹಾಗೂ ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆಎಂಎಫ್ ಕೇಂದ್ರ ಕಚೇರಿಮುಂಭಾಗ ಬೃಹತ್ ಪ್ರತಿಭಟನೆ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ನಗರದ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ಕಚೇರಿಯಲ್ಲಿ ಪತ್ರಿಕಾ ಘೋಷ್ಟಿ ಉದೇಶಿಸಿ ಕರ್ನಾಟಕ ರಾಜ್ಯ ರೈತಸಂಘದ ತಾಲ್ಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ ರಾಜ್ಯಸರ್ಕಾರ ಹಾಲಿಗೆ ನೀಡುವ ಪ್ರೋತ್ಸಾಹ ಧನ ನೀಡದೆ, ರೈತರನ್ನ ನಿರ್ಲಕ್ಷ್ಯ ಮಾಡುತ್ತಿದೆ,ಕೃಷಿ ಉಪಕರಣಗಳ ವೆಚ್ಚ ಹಾಗೂ ಹೈನು ನಿರ್ವಹಣಾ,ವೆಚ್ಚ ಹೆಚ್ಚಳವಾಗುತ್ತಿದ್ದು,ಹೈನುಗಾರರುಸಂಕಷ್ಟಎದುರಿಸುವಂತ್ತಾಗಿದೆ, ರೈತರ ಉಪಕಸುಬಾದ ಹೈನುಗಾರಿಕೆ ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಾಡಿನ ಜನತೆಗೆ ಉತ್ತಮ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುತ್ತಾ ಬೃಹತ್ ಉದ್ಯಮವಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗವನ್ನು ಸೃಷ್ಟಿಸಿ ದೇಶದಲ್ಲಿ ನಂದಿನಿ ಬ್ರಾಂಡ್ ಹೆಸರಿನಲ್ಲಿ ಚಿರಪರಿಚಿತವಾಗಿದೆ. ಆಡಳಿತ ಮಂಡಳಿಯ ಅವೈಜ್ಞಾನಿಕ ನಿರ್ಧಾರ.
ನೌಕರಶಾಹಿಯ ನಿರ್ಲಕ್ಷತನ, ಅನಾವಶ್ಯಕ ದುಂದುವೆಚ್ಚ, ರಾಜಕೀಯ ಹಸ್ತಕ್ಷೇಪ, ಮುಂತಾದ ಕಾರ್ಯಗಳಿಂದ ಈ ಬೃಹತ್ ಉದ್ದಿಮೆಯನ್ನ ಶೋಷಣೆ ಮಾಡುವ ಮೂಲಕ ಅವನತಿಯ ಹಾದಿ ಹಿಡಿಯುತ್ತಿರುವುದು, ದುರಂತದ ಸಂಗತಿ, ಬರಗಾಲ ಮೇವಿನ ಕೊರತೆ, ಕಾಲುಬಾಯಿ ಜ್ವರ, ಚರ್ಮಗಂಟು ರೋಗ, ಹೆಚ್ಚಲು ಬಾವು, ಗರ್ಭ ಧರಿಸದೇ ಇರುವುದು. ಮುಂತಾದ ರೋಗಗಳಿಂದ ಹಾಲು ಉತ್ಪಾದಕರ ಆರ್ಥಿಕ ಸ್ಥಿತಿ ಅದೋಗತಿಯಾಗಿದೆ, ಬಾಟಲ್ ನೀರಿಗೆ ನೀಡುವ ಬೆಲೆ ಹಾಲಿಗಿಲ್ಲ, ಹಾಲು ತರಕಾರಿ ಹಾಗೂ ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯದೆ ನಿರಂತರ ಸಾವು ಬದುಕಿನ ನಡುವೆ ಜೀವನ ಸಾಗಿಸುತ್ತಿದ್ದಾರೆ.
ದೇಶದ ಯಾವುದೇ ರಾಜ್ಯದಲ್ಲಿ ಇಷ್ಟು ಕಡಿಮೆ ಬೆಲೆ ಹಾಲಿಗೆ ಇರುವುದಿಲ್ಲ. ರೈತರು ಸಾಲಸೂಲಮಾಡಿ ಹಸುಗಳನ್ನು ಖರೀದಿಸಿ ದುಬಾರಿ ಬೆಲೆಗೆ ಹಿಂಡಿ, ಬೂಸ ಮತ್ತು ಪಶು ಆಹಾರಗಳನ್ನು ಖರೀದಿಸಿ ಪುಕ್ಕಟೆ ಹಾಲು ನೀಡಿದಂತಾಗಿದೆ. ಸತತ ನಷ್ಟಕ್ಕೆ ಒಳಗಾಗುತ್ತ ಸಾವಿರಾರು ರೈತರು ಹೈನು ಉದ್ಯಮದಿಂದ ಹಿಂದೆ ಸರಿಯುವಂತಾಗುತ್ತಿದೆ. ಆದ್ದರಿಂದ ಈ ಎಲ್ಲಾ ಶೋಷಣೆಗೆ ಕಾರಣವಾದ ನೀತಿ ನಿರ್ದಾರಗಳನ್ನು ಪರಿಪಡಿಸಲು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸುವಂತೆ ಒತ್ತಾಯಿಸಲು ಸಾವಿರಾರು ಹಾಲು ಉತ್ಪಾದಕರು ಪಾಲ್ಗೊಳ್ಳುವ ಮೂಲಕ ಈ ಬೃಹತ್ ಉದ್ಯಮವನ್ನು ಸರಿಯಾಗಿ ಮುನ್ನಡೆಸಬೇಕಾಗದೆ, ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 50 ರೂ. ನಿಗದಿಪಡಿಸಬೇಕು.ಪಶುಆಹಾರದ ಬೆಲೆಯನ್ನು ಕಡಿಮೆ ಮಾಡಿ ಹೆಚ್ಚಿನ ಸಹಾಯಧನ ನೀಡಬೇಕು. ಪಶುಆಹಾರಕ್ಕೆ ಬಳಸುವ ಮೆಕ್ಕೆಜೋಳವನ್ನು ರೈತರಿಂದಲೇ ನೇರವಾಗಿಖರೀದಿಸಬೇಕು.ಸ್ಥಳೀಯ ಹಾಲು ಮಾರಾಟಕ್ಕೆ ವಿಧಿಸುವ ಲೇವಿಯನ್ನು ರದ್ದುಗೊಳಿಸಬೇಕು.
