ಮಾಲಿಕನ ಜೊತೆಗೆ ವಾಕಿಂಗ್ ಬಂದ ಹುಂಜ: ಎಲ್ಲರಿಗೂ ಅಚ್ಚರಿ!

ಭಾಸ್ಕರ ಪತ್ರಿಕೆ
0

ಚಿತ್ರದುರ್ಗ: ಮುಂಜಾನೆ ಸಾಮಾನ್ಯವಾಗಿ ನಾಯಿಯನ್ನು ಕರೆದುಕೊಂಡು ವಾಕಿಂಗ್ ಗೆ ಹೋಗುವವರನ್ನು ನೀವು ನೋಡಿರಬಹುದು. ಆದ್ರೆ ಇಲ್ಲೊಬ್ಬರು ತಮ್ಮ ಪ್ರೀತಿ ಪಾತ್ರವಾದ ಹುಂಜವನ್ನು ವಾಕಿಂಗ್ ಗೆ ಕರೆದೊಯ್ದಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣಕ್ಕೆ ಪ್ರತಿ ನಿತ್ಯ ನೂರಾರು ಜನರು ವಾಕಿಂಗ್ ಗೆ ಬರುತ್ತಿರುತ್ತಾರೆ. ಇದೇ ಕ್ರೀಡಾಂಗಣಕ್ಕೆ  ನಗರದ ವ್ಯಾಪಾರಿ ಆಯೂಬ್ ಎಂಬವರು ತಮ್ಮ ಹುಂಜವನ್ನು ಕರೆದುಕೊಂಡು ವಾಕಿಂಗ್ ಗೆ ಬಂದಿದ್ದಾರೆ.

ಮಾಲಿಕ ಆಯೂಬ್ ಜೊತೆಗೆ ಹುಂಜ ವಾಕಿಂಗ್ ಮಾಡುತ್ತಾ, ಎಲ್ಲರ ಗಮನ ಸೆಳೆದಿದೆ. ಮಾಲಿಕನ ಜೊತೆಗೆ ವಾಕಿಂಗ್ ಮಾಡುತ್ತಿರುವ ಹುಂಜವನ್ನು ನೋಡಿ ಸಾರ್ವಜನಿಕರು ಅಚ್ಚರಿಗೀಡಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*