ವಿಶ್ವಕರ್ಮ ಸಮಾಜದ ರಾಜ್ಯ ಮುಖಂಡರು ಹಾಗೂ ಸಂಪಾದಕರು ತಿಪಟೂರು ಭಾಸ್ಕರ್ ಅವರಿಂದ ವಿಶ್ವ ವೀರಶೈವ- ಲಿಂಗಾಯತ ಮಹಾ ವೇದಿಕೆ ರಾಜ್ಯಾಧ್ಯಕ್ಷರು ಎಂ.ಎನ್. ಕುಮಾರಸ್ವಾಮಿಯವರಿಗೆ ಅಭಿನಂದನೆ

ಭಾಸ್ಕರ ಪತ್ರಿಕೆ
0

ಶ್ರೀಮಠದ ಶ್ರೀಗಳವರ ಸಾನಿಧ್ಯದಲ್ಲಿ   ನಡೆದ ಸಭೆಯಲ್ಲಿ  ವಿಶ್ವ ವೀರಶೈವ ಮಹಾವೇದಿಕೆ ಸಂಸ್ಥಾಪಕ ಅಧ್ಯಕ್ಷರು  ರಾಜಪುರ ಮಠದ  ಶ್ರೀ ನಟರಾಜ್ ಅವರು  ವಿಶ್ವ ವೀರಶೈವ - ಲಿಂಗಾಯತ ಮಹಾ ವೇದಿಕೆ ರಾಜ್ಯಧ್ಯಕ್ಷರಾಗಿ ಹಾಸನ ಜಿಲ್ಲೆಯ  ರಾಮನಾಥಪುರದ ಶರಣರಾದ‌  ಎಂ.ಎನ್. ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಿ ಅಧಿಕೃತ  ಪ್ರತಿಯನ್ನು ನೀಡಿದರು.

ಹಾಸನ-    ಸಮಾಜದ ಅಭಿವೃದ್ಧಿಯ ಜೊತೆಗೆ ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುವ ಮೂಲಕ ಜನ ಜಾಗೃತಿ ಮೂಡಿಸಬೇಕೆಂದು ವಿಶ್ವ ವೀರಶೈವ ಮಹಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರು    ರಾಜಪುರ ಮಠದ ಶ್ರೀ ನಟರಾಜ್ ಅವರು ತಿಳಿಸಿದರು.

ಬೆಂಗಳೂರು ಜಿಲ್ಲೆಯ ಅನೇಕಲ್ ತಾಲೂಕು ರಾಜಪುರ ಮಠದಲ್ಲಿ  ಶ್ರೀಮಠದ ಶ್ರೀಗಳವರ ಸಾನಿಧ್ಯದಲ್ಲಿ ನಡೆದ  ವಿಶ್ವ ವೀರಶೈವ- ಲಿಂಗಾಯತ  ಮಹಾವೇದಿಕೆವತಿಯಿಂದ  ನಡೆದ ಸಭೆಯಲ್ಲಿ ಹಾಸನ ಜಿಲ್ಲೆಯ ರಾಮನಾಥಪುರದ ಶರಣರಾದ ಎಂ.ಎನ್. ಕುಮಾರಸ್ವಾಮಿ ಅವರಿಗೆ ವಿಶ್ವ ವೀರಶೈವ ಮಹಾ ವೇದಿಕೆ ರಾಜ್ಯಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆ ಮಾಡಿ ಅಧಿಕೃತ ಪತ್ರ ನೀಡಿದ ನಂತರ  ಮಾತನಾಡಿದ ಶ್ರೀ ನಟರಾಜು ಅವರು  ಈ ಹಿಂದೆ ಹಾಸನ ಜಿಲ್ಲಾ ಅಧ್ಯಕ್ಷರಾಗಿ  15 ವರ್ಷಗಳಿಂದ ಕುಮಾರಸ್ವಾಮಿ ಅವರು ಉತ್ತಮ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ನಮ್ಮಗಳ ಜೊತೆಯಲ್ಲಿ ಸೇರಿಕೊಂಡು  ಕರ್ನಾಟಕ, ಮತ್ತು ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು  25  ಸಾವಿರಕ್ಕೂ ಹೆಚ್ಚು ಶಿವದೀಕ್ಷೆ, ಲಿಂಗಧಾರಣೆ ಮಾಡಿಕೊಂಡು ಬಂದಿದ್ದಾರೆ.  ಇವರು ಇನೂ ಹೆಚ್ಚಿನ  ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ  ಶಿವದೀಕ್ಷೆ, ಜನ ಜಾಗೃತಿ, ಸಂಘಟನೆಯ ಕಡೆ ಒತ್ತು ನೀಡಬೇಕೆಂದು ಶ್ರೀ ನಟರಾಜ್ ಅವರು ಕುಮಾರಸ್ವಾಮಿ ಅವರಿಗೆ  ಕಿವಿಮಾತು ಹೇಳಿದರು.

ರಾಜಪುರ ಮಠದಲ್ಲಿ ವಿಶ್ವ ವೀರಶೈವ ಮಹಾ ವೇದಿಕೆಯ ನೂತನ ರಾಜ್ಯಧ್ಯಕ್ಷರು  ಎಂ.ಎನ್.ಕುಮಾರಸ್ವಾಮಿ ಅವರನ್ನು‌ ತಿಪಟೂರು ವಿಶ್ವಕರ್ಮ ಸಮಾಜದ ಸಂಚಾಲಕರು  ಹಾಗೂ  ಸಂಪಾದಕರು ಭಾಸ್ಕರ್, ಹಾಸನ ಜಿಲ್ಲಾ ವಿಶ್ವ ವೀರಶೈವ- ಲಿಂಗಾಯತ ವೇದಿಕೆ  ಅಧ್ಯಕ್ಷರು ಪ್ರಕಾಶ್, ಸಂಚಾಲಕರಾದ  ಶರಣ ಚಂದ್ರಶೇಖರ್, ಮನು, ಪಂಚಾಕ್ಷರಿ ಮುಂತಾದವರು ಅಭಿನಂದನೆ ಸಲ್ಲಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*