ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ (ರಿ) ತಿಪಟೂರು ಶಾಖೆಯ ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರ 135ನೇ ಜಯಂತಿಯ ಪ್ರಯುಕ್ತ ದಿನಾಂಕ 14-4-2025 ನೇ ಸೋಮವಾರ ಸಮಯ 4ಗಂಟೆಗೆ ತಿಪಟೂರಿನ ಪ್ರತಿಷ್ಠಿತ ಕಲ್ಪತರು ಗ್ರಾಂಡ್ ನಲ್ಲಿ KERA ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘಕ್ಕೆ ನೂತನ ತಾಲೂಕ್ ಅಧ್ಯಕ್ಷರಾಗಿ ಟಿ. ರಾಜು ಬೆಣ್ಣೇನಹಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಈ ಸುದಿನ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಭಾಸ್ಕರ ಪತ್ರಿಕೆ ಮತ್ತು ಭಾಸ್ಕರ TV ಯುಟ್ಯೂಬ್ ಚಾನೆಲ್ ಸಂಪಾದಕರು ಹಾಗೂ ಕರ್ನಾಟಕ ಸಂಪಾದಕರು ಮತ್ತು ವರದಿಗಾರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಡಾ! ಭಾಸ್ಕರ್ ತಿಳಿಸಿದರು.
ವರದಿ: ಟಿ. ರಾಜು ಬೆಣ್ಣೇನಹಳ್ಳಿ

