ಕೆ.ಪಿ.ನಂಜುಂಡಿಗೆ ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದಿಂದ ಅಭಿನಂದನೆ

ಭಾಸ್ಕರ ಪತ್ರಿಕೆ
0

ಮೈಸೂರು: ವಿಶ್ವಕರ್ಮ ಸಮಾಜದಲ್ಲಿ ಕಳೆದ 25 ವರ್ಷ ಗಳಿಂದ ವಿಶ್ವಕರ್ಮ ಸಮಾಜದ ಧ್ವನಿ, ಪಂಚ ಕುಲಕಸುಬುಗಳ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಅಖಿಲ ಕರ್ನಾ ಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರನ್ನು ಬೆಂಗಳೂರಿನ ಮಲ್ಲೇಶ್ವರಂನ ಶ್ರೀಲಕ್ಷ್ಮಿ ಗೋಲ್ಡ್‌ ಪ್ಯಾಲೇಸ್‌ನಲ್ಲಿ ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದಿಂದ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ರಿಷಿ ವಿಶ್ವಕರ್ಮ, ಪ್ರಧಾನ ಕಾರ್ಯ ದರ್ಶಿ ಹಾಗೂ ಕಾಂಗ್ರೆಸ್‌ ಮುಖಂಡ ಸಿ. ಟಿ.ಆಚಾರ್ಯ, ವಿಶ್ವಕರ್ಮ ಪತ್ತಿನ ಸಹ ಕಾರ ಸಂಘದ ಅಧ್ಯಕ್ಷ ಜಯರಾಮಚಾರ್, ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಬಸವರಾಜು, ಲೋಕೇಶ್ ಹಾಗೂ ವಿಶ್ವಕರ್ಮ ಮಹಾ ಸಭಾ ಹಿರಿಯ ಮುಖಂಡ ಅರಕೇಶಚಾರ್, ಲೇಖಕರು ಮತ್ತು ಹವ್ಯಾಸಿ ಸಂಶೋಧಕ ಸತೀಶ್ ಮುಳ್ಳೂರು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಉಸ್ತುವಾರಿ ಅಶೋಕ ಎಸ್. ಪೊದ್ದಾರ ಹರಸೂರ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*