ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆಯಾಗಿ ಶ್ರೀಮತಿ ಅರುಣಾ ಸುರೇಶ್ ಆಯ್ಕೆ,ಪದಗ್ರಹಣ

ಭಾಸ್ಕರ ಪತ್ರಿಕೆ
0

ಮಂಗಳೂರು: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆಯಾಗಿ ಶ್ರೀಮತಿ ಅರುಣಾ ಸುರೇಶ್ ಸರ್ವಾನುಮತದಿಂದ ಆಯ್ಕೆ ಗೊಂಡು, ಪದ ಗ್ರಹಣ ಸಮಾರಂಭ 14-06-2025 ರಂದು ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ದಲ್ಲಿ ನಡೆಯಿತು. ವಿಗ್ನೇಶ್ ಪುರೋಹಿತರು ಪ್ರಾರ್ಥನೆಗೈದರು.

ಗೌರವಾಧ್ಯಕ್ಷರರಾಗಿ ಶ್ರೀಮತಿ ಶಕುಂತಳಾ ಬಿ ರಾವ್, ಉಪಾಧ್ಯಕ್ಷರಾಗಿ ಶ್ರೀಮತಿ ವಿದ್ಯಾ ರವೀಂದ್ರ,  ಕಾರ್ಯದರ್ಶಿಯಾಗಿ ಶ್ರೀಮತಿ ಸುಜಾತ ಪ್ರಕಾಶ್, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ವಿಶ್ವಕಲಾ ವಿಶ್ವಜ್ಞಮೂರ್ತಿ ಮತ್ತು ಶ್ರೀಮತಿ ಪ್ರತಿಭಾ ಪ್ರಮೋದ್,  ಕೋಶಾಧಿಕಾರಿಯಾಗಿ ಶ್ರೀಮತಿ ವನಿತಾ ಉಪೇಂದ್ರ ಆಚಾರ್ಯ, ಜತೆ ಕೋಶಾಧಿಕಾರಿ ಯಾಗಿ ಶ್ರೀಮತಿ ರೇಖಾ ರಾಜ್ ಮತ್ತು ಶ್ರೀಮತಿ ಅಕ್ಷತಾ ಉದಯ,  ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಸುಕನ್ಯ ಲೊಕೇಶ್, ಶ್ರೀಮತಿ ನೀತಾ ಕಿಶೋರ್, ಶ್ರೀಮತಿ ಮಮತಾ ಲಕ್ಷ್ಮಣ್, ಶ್ರೀಮತಿ ಸುಮಾ ರಾಜೇಶ್ ಇವರುಗಳು  ಆಯ್ಕೆಗೊಂಡಿರುತ್ತಾರೆ. ಮಹಿಳಾ ಸಮಿತಿಯ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಹಿಳಾ ಸಮಿತಿಯ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಎಲ್ಲರ ಸಹಕಾರವನ್ನು ನೂತನವಾಗಿ ಆಯ್ಕೆ ಗೊಂಡ ಅಧ್ಯಕ್ಷೆ ಶ್ರೀಮತಿ ಅರುಣಾ ಸುರೇಶ್ ಈ ಸಂದರ್ಭದಲ್ಲಿ ಹೇಳಿದರು. 

ಇವರಿಗೆ ಕರ್ನಾಟಕ ರಾಜ್ಯ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಡಾ. ಭಾಸ್ಕರರಾಚಾರ್‌, ತಿಪಟೂರು ಅಭಿನಂದನೆ ಸಲ್ಲಿಸಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*