ಬಿ.ಕೆ.ಹರಿಪ್ರಸಾದ್ ಗೆ ಸಚಿವ ಸಂಪುಟ ಸ್ಥಾನಕೊಡಿ: ಈಡಿಗ ಸಮಾಜ ಮುಖಂಡ ಎಸ್.ಎನ್.ನಾಗರಾಜು ಒತ್ತಾಯ

ಭಾಸ್ಕರ ಪತ್ರಿಕೆ
0

ಸರಗೂರುವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ರವರಿಗೆ ಸಚಿವ ಸಂಪುಟದಲ್ಲಿ ಉನ್ನತ ಮಟ್ಟದ ಸ್ಥಾನ ನೀಡುವಂತೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ರವರಿಗೆ ಸಚಿವ ಸಂಪುಟ ವಿಸ್ತರಣೆ ಸಭೆಯಲ್ಲಿ ಉನ್ನತ ಮಟ್ಟದ ಸಚಿವ ಸ್ಥಾನ ನೀಡಲಿ ಎಂದು ಪಟ್ಟಣ ಆರ್ಯ ಈಡಿಗ ಸಮಾಜದವರು ಸಂತೆ ಮಾಸ್ತಮ್ಮ ಹಾಗೂ ರಾಮಮಂದಿರ ದೇವಸ್ಥಾನದಲ್ಲಿ ಶುಕ್ರವಾರ ದಂದು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ನಮ್ಮ ಸಮಾಜದ ನಾಯಕರು ಬಸವರಾಜು, ‌ ಜನಾರ್ಧನ್ ಪೂಜಾರು, ದಿ.ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಆರ್.ಎನ್.ಜಾಲಪ್ಪ, ಕುಮಾರ್ ಬಂಗಾರಪ್ಪ ಇವರು ಎಲ್ಲಾರೂ ರಾಜ್ಯದಲ್ಲಿ ರಾಜಕೀಯ ಮಾಡಿಕೊಂಡು ಬಂದರು.

ಅಲ್ಲಿಂದ ಇಲ್ಲಿಯವರೆಗೆ ಯಾವುದೇ ನಮ್ಮ ಸಮಾಜದ ನಾಯಕರಿಗೆ ಸಚಿವ ಸ್ಥಾನ ನೀಡಿಲ್ಲ.ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿ.ಕೆ.ಹರಿಪ್ರಸಾದ್ ರವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಅವರು ಎಲ್ಲಾ ಸಮುದಾಯಗಳ ಜೊತೆ ಕೈಜೋಡಿಸಿಕೊಂಡು ಅಧಿಕಾರದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷ, ಜನ ಕಷ್ಟದಲ್ಲಿದ್ದಾಗ ಕೈ ಬಿಡದೆ ಬೆಂಬಲವಾಗಿ ನಿಲ್ಲುತ್ತಾರೆ. ಅವರಿಗೆ ಅವಕಾಶ ನೀಡಿದರೆ ಕಾಂಗ್ರೆಸ್ ಗೆ ದೊಡ್ಡ ಶಕ್ತಿ ಬರುತ್ತದೆ. ಪಕ್ಷಗೆ  ಸಹಾಯವಾಗುತ್ತದೆ.   ಹೋರಾಟ ಮನೋಭವ ಇರುವವರಿಗೆ ಅವಕಾಶ ಕಲ್ಪಿಸಬೇಕು ಎಂದು ಕೇಳಿಕೊಂಡರು.

ಸುಮಾರು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮುದಾಯದ ಮುಂಚೂಣಿ ನಾಯಕರಾಗಿದ್ದಾರೆ. ಸರ್ವರ ಸೇವೆ ಮಾಡಲು ಅನುವು ಮಾಡಿಕೊಡುವಂತೆ ಕೇಳಿಕೊಂಡರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಬುಲೇಟ್ ಮಂಜು, ರಾಜಣ್ಣ,ಶೈನಪ್ಪ, ಲಕ್ಷ್ಮಣ್, ರಾಜಣ್ಣ,ದಾಸರಾಜು, ತುಕಾರಾಮ, ವೆಂಕಟೇಶ್, ರಾಮಲಿಂಗಾ, ಶ್ರೀನಿವಾಸ, ನರಸಿಂಹ, ಗೋವಿಂದ, ಶ್ರೀನಿವಾಸ ಟೈಲರ್, ಭದ್ರ, ಗಣಪತಿ, ಗುರುಸ್ವಾಮಿ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*