ವಿದ್ಯಾನಗರ 3ನೇ ಅಡ್ಡರಸ್ತೆಯ ಹಿರಿಯ ಪತ್ರಕರ್ತರಾದ ಭಾಸ್ಕರ್ ರವರ ಮನೆ ಆವರಣದಲ್ಲಿ ದಿನಾಂಕ 05.06.2025 ಗುರುವಾರ ಬೆಳಗ್ಗೆ 10.30 ಗಂಟೆಯಿಂದ 1:30ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಭಾಸ್ಕರ ಪತ್ರಿಕೆ
0

ತಿಪಟೂರು: ನಗರದ ಹಾಸನ ಸರ್ಕಲ್ ಪೆಟ್ರೋಲ್ ಬಂಕ್ ಹಿಂಭಾಗ, ವಿದ್ಯಾನಗರ 3ನೇ ಅಡ್ಡರಸ್ತೆಯ  ಹಿರಿಯ ಪತ್ರಕರ್ತರಾದ ಭಾಸ್ಕರ್ ರವರ ಮನೆ ಆವರಣದಲ್ಲಿ  ದಿನಾಂಕ 05.06.2025 ಗುರುವಾರ ಬೆಳಗ್ಗೆ 10.30 ಗಂಟೆಯಿಂದ 1:30ರ ವರೆಗೆ   ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆರ್ಥಿಕ ಸಾಕ್ಷರತಾ ಕೇಂದ್ರವು    ಆಯೋಜಿಸಲಾಗಿದ್ದು. ಮಹಾವೀರ್ ಜೈನ ಹಾಸ್ಪಿಟಲ್ ಬೆಂಗಳೂರು ಮತ್ತು ಸುನಂದ ಕಣ್ಣಿನ ಆಸ್ಪತ್ರೆ ತಿಪಟೂರು ಇವರ ಸಹಯೋಗದಲ್ಲಿ ರಕ್ತದೊತ್ತಡ, ಮಧುಮೇಹ, ಪಾದ ಸಂರಕ್ಷಣೆ, ಅಗತ್ಯ ಉಳ್ಳವರಿಗೆ ಇಸಿಜಿ ಮತ್ತು ಕಣ್ಣಿನ ತಪಾಸಣೆಯನ್ನು ಉಚಿತವಾಗಿ ಆಯೋಜಿಸಲಾಗಿದೆ  ಮತ್ತು ಆರ್ಥಿಕ ಸಾಕ್ಷರತಾ ಕೇಂದ್ರ ತಿಪಟೂರು ಕಿರಿಯ ಸಲಹೆಗಾರರಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಜೀವನ್ ಸುರಕ್ಷೆ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯ ಬಗ್ಗೆ ಮಾಹಿತಿ, ಬ್ಯಾಂಕ್ ಗಳ ಕಾರ್ಯಗಾರ ಆರ್ಥಿಕ ಸಲಹೆಗಳನ್ನು ನೀಡಲಾಗುವುದು ಈ ಕಾರ್ಯಕ್ರಮಕ್ಕೆ ಬಂದು ಮಿತ್ರರು ಹಾಗೂ ನಗರದ ಪತ್ರಕರ್ತರುಗಳು ಕುಟುಂಬ ಸಮೇತ ಆಗಮಿಸಿ ಸದುಪಯೋಗಿಸಿಕೊಳ್ಳಬೆ ಕೆಂದು  ಕರ್ನಾಟಕ ಸಂಪಾದಕರು ಹಾಗೂ ವರದಿಗಾರರು ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಭಾಸ್ಕರ್, ತಾಲೂಕು ಅಧ್ಯಕ್ಷರಾದ ಟಿ ರಾಜು, ಪ್ರಧಾನ ಕಾರ್ಯದರ್ಶಿಯಾದ ಕುಪ್ಪಾಳು ದರಣೇಶ್, ಖಜಾಂಚಿ ಶುಭ ವಿಶ್ವಕರ್ಮ, ಕಾರ್ಯದರ್ಶಿ ಮಂಜುನಾಥ್ ಸಹ ಕಾರ್ಯದರ್ಶಿ  ಮಂಜುನಾಥ್ ಡಿ,  ಹಾಗೂ ಎಲ್ಲಾ ಸಂಘದ ಸದಸ್ಯರುಗಳು ಹಾಗೂ ಪತ್ರಕರ್ತರುಗಳು ಬಂದು ಮಿತ್ರರು ಆಗಮಿಸಬೇಕು ಎಂದು ಕೋರಿದರು. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448425381, 9900657419

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*